ತಿಮ್ಮನ ಚಿತ್ರ "ವರದಿ"ಗಾರಿಕೆ....

ತಿಮ್ಮನ ಚಿತ್ರ "ವರದಿ"ಗಾರಿಕೆ....

ಬರಹ

ನಮ್ಮ ತಿಮ್ಮ ಈಗ ತಾನೇ ಪತ್ರಿಕ ದಿಪ್ಲೋಮ ಮುಗಿಸಿ ಕಾಲೇಜಿನಿಂದ ಹೊರಬಂದಿದ್ದಾನೆ ( ಮುಗಿಸಿದ ಅನ್ನುವುದಕ್ಕಿಂದ ಬಹಳ ಕಷ್ಟ ಪಟ್ಟು 3ನೇ ಕ್ಲಾಸ್ ನಲ್ಲಿ ಅಯಿತೆಂದೇ ಹೇಳಬಹುದು!!!). ಅವನಿಗೊ ತಾನು ಪತ್ರಕರ್ತನಾಗಬೇಕೆಂಬ ಹೆಬ್ಬಯಕೆ. ಹೇಗೊ ಅದನ್ನು ತೀರಿಸಿಕೊಳ್ಳಬೇಕೆಂಬ ಬಯಕೆ ಬಂದಿರಲು ಕೊಡಲೆ " ಚಿತ್ರ-ವಿಚಿತ್ರ" ಸಿನಿಮಾ ಕಚೇರಿಗೆ ಓಡಿ ತನ್ನ ಮನಸ್ಸಿನ ಆಸೆಗಳನೆಲ್ಲಾ ಸಂಪಾದಕರ ಮುಂದೆ ತೋಡಿಕೊಂಡು, ( ಗೋಗರೆದು!!! :)) ತನ್ನನ್ನು ವರದಿಗಾರನಾಗಿ ಮಾಡುವಂತೆ ಬಿನ್ನವಿಸಲು... ಸಂಪಾದಕರು - ಇವನ ನೀಳ್ಗಥೆಗೆ ಮರುಕಪಟ್ಟು 100.ರೂ ಯನಿತ್ತು ಒಂದು ಚಿತ್ರವನ್ನು ನೋಡಿ ವಿಮರ್ಶೆ ಮಾಡಲು ಹೇಳುತ್ತಾರೆ. ಆದರೆ ತಿಮ್ಮನ ದುರಾದ್ರುಷ್ಟಕ್ಕೆ ಆ ವಾರದಲ್ಲಿ ಯಾವ ಹೊಸ ಚಿತ್ರ ಬಿಡುಗಡೆ ಅಗಿರಲಿಲ್ಲ. ಕೊನೆಗೆ ಊರಲ್ಲ ಸುತ್ತಿ, ಮೆಜೆಸ್ಟಿಕ್ ಹತ್ತಿರದ "ಕಪಾಲಿ" ಥೇಟರ್ ಗೆ ಬಂದಾಗ, ಅಲ್ಲಿ ಹಳೆಯ ಚಿತ್ರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಪ್ರದರ್ಶನ ಕಾಣುತಿತ್ತು.

............

ಚಿತ್ರವನೇನೊ ನೋಡಿದ ನಮ್ಮ ತಿಮ್ಮ ತನ್ನ ಇದ್ದ ಕೆಲಸ ಮರೆತು ತನ್ನ ಪ್ರೇಯಸಿಯ ಜೊತೆ ಸುತ್ತಲು ಹೊರಟ. ಸರಿಸುಮಾರು ರಾತ್ರಿ 11 ಗಂಟೆಗೆ ಅವನ ಸಂಪಾದಕನ ಕರೆ ಬರುತ್ತದೆ. ಕೇವಲ ಅರ್ಧ ಗಂಟೆಯಲ್ಲಿ ವಿಮರ್ಶೆ ಫಾಕ್ಸ್ ಮಾಡುವಂತೆ ಜೋರು ದನಿ ಆಕಡೆಯಿಂದ ಕೇಳುತ್ತದೆ. ಸತ್ತನೋ - ಬಿಟ್ಟನೋ ಎಂದು ನಮ್ಮ ತಿಮ್ಮ ಅವಸರದಲ್ಲಿ ತಾನು ನೋಡಿದ ಚಿತ್ರದ ಬಗ್ಗೆ ಗೀಚಲು ಪ್ರಾರಂಭಿಸುತ್ತಾನೆ. ಬರೆಯುವ ಹೊಡೆತದಲ್ಲಿ ತಾನು ಮಾಡಿದ ತಪ್ಪಿನ (ಪೂರ್ಣ ವಿರಾಮ, ಅಲ್ಪ ವಿರಾಮ ಚಿನ್ಹೆಗಳನ್ನು ಹಾಕದೆ ಬರೆದುದ್ದು!! )ಅರಿವಾಗುತ್ತದೆ. ಅವನು ಅವಸರದಲ್ಲಿ ಅಂದಾಜಿನಿಂದ ಪೂರ್ಣ ವಿರಾಮ, ಅಲ್ಪ ವಿರಾಮ ಚಿನ್ಹೆಗಳನ್ನು ಹಾಕಿ ಸಂಪಾದಕರಿಗೆ ಫಾಕ್ಸ್ ಮಾಡುತ್ತಾನೆ. ಅದನ್ನು ಓದಿದ ಸಂಪಾದಕರು ಇವನಂಥಾ ಕನ್ನಡ ಸುಪುತ್ರನನ್ನು ಪದೆದ ಈ ನಾಡೇ ಧನ್ಯ...!!! ಎಂದು ತಲೆ ತಿರುಗಿ ಬಿದ್ದರು... ನಿಮಗೂ ತಿಳಿಯಬೇಕೆ ಅವನು ಏನು ಬರೆದ ಅಂತಾ... ನೀವೇ ಓದಿ....

...........................

ಪ್ರಿಯ ಓದುಗರೆ,

ನಾ ನೋಡಿದೆ ಚಿತ್ರ ನೋಡಿ ಸ್ವಾಮಿ ನಾವಿರೋದೆ. ಹೀಗೆ ಶಂಕರ ಮೊದಲ ಸೀನ್ ಇಲಿ, ಹಿಡಿದ ಬಾಲವ ಸಮೇತ ನೀರು, ಕೊಳಾಯಿ ದಾರಿಯಾಯಿತು ಸುಗಮ ನೀರು, ನಂತರ ಹರಿಯಿತು ಜುಳು-ಜುಳು ಎಲ್ಲರ, ಸ್ನಾನ ಆಯಿತು ನಂತರ ಪಕ್ಕದ ಮನೆಯವನ, ಹೆಂಡತಿ ಜೊತೆ ಜಗಳ ಮಾಡುತ್ತಿದ್ದ ನಮ್ಮ ಮೈಸೂರು. ಹೋಗಿ ಅಧ್ಹೇಗೋ ಬಿಡಿಸಿದ ಕೊಟ್ಟು ಅವನಿಗೆ, ಕಾಸು ಹೊರಟ ಅವನ ಗೆಳೆಯ ಶಿವನ, ಹತ್ತಿರ ಅವನ ಪ್ರೀತಿಯ ಗೆಳತಿ ರಾಜಿಯ, ಅವನು ಪ್ರೀತಿಸುತ್ತಿದ್ದ ಹೇಳಲು, ಆಗದೆ ಹೇಳಿದನು ಮೈಸೂರಿನ, ಹತ್ತಿರ ಸಿಗುತ್ತಾರೆ ಕಾಲೇಜ್. ನಲ್ಲಿ ಮಾತನಾಡಿಸಲು, ಬರಿಸುತ್ತನೆ ಒಂದು. ಪತ್ರ ಅದನು ಓದಿ ಹಾಡಲು. ಅಗ ತರುತ್ತಾನೆ, ಲೌಡ್ ಸ್ಪೇಕರ್ ಹೇಳಿ ಅವಳ, ಲವ್ ಪಡೆಯುತ್ತಾನೆ ಅಪ್ಪ, ಅವಳ ತುಂಬ ಘಾಟಿ ಇರುತ್ತಾನೆ ಇನ್ಕಮ್ ಟ್ಯಾಕ್ಸ್ ಆೞೀಸಿನಲ್ಲಿ, ಚಪರಾಸಿ ಹತ್ತಿರವೂ ಮಾಡುತ್ತಾನೆ, ಗಲಾಟೆ ಹೋಗಿ ಮತ್ತೆ ಮೈಸೂರಿನ. ಹತ್ತಿರ ಹೇಳಲು ಅವನು ಒಪ್ಪಿಸಿ, ಮಾಡಿಸಿದ ಮದುವೆ ಅದರೆ ಅಗುತ್ತದೆ, ಸ್ಟೋರಿ ಚೇಂಜ್ ಗಂಡ-ಹೆಂಡತಿ, ಮನಸ್ಸು ಚೇಂಜ್ ದಿನ ಜಗಳ, ಹಾಲಿನವಳ ಹತ್ತಿರ ಬಿಲ್ಲಿನವ. ಹತ್ತಿರ ಗಲಾಟೆ ಮಾಡಿ- ಮಾಡಿ ಬರುತ್ತದೆ, ದೈವೋರ್ಸ್ ಹತ್ತಿರ. ಲಾಯರ್ ಹತ್ತಿರ ಶಿವ ರಾಜಿ, ಜಗಳ ಬಿಡಿಸಲು ಮೈಸೂರು, ಹೇಳಿದ ಕಥೆ ತನ್ನ ಅಣ್ಣನ ಹಾಡಿ. ಹಾಡಿ ಹೇಗೆ ಕೇಳದೆ, ಹೋದ ತನ್ನ ಹೆಂಡತಿಯ ನಂತರ, ಸತ್ತಳು ಅವಳ ಮಗ. ಕೊಟ್ಟು ಅವನು ಮೈಸೂರಿಗೆ ತೋರಿಸುತಾ ತನ್ನ, ಅಣ್ಣನ ಮಗನನ್ನು ಹೇಳಿದ ಅವನು ಮಾಡಬೇಡ, ಎಂದೆಂದು ಹೀಗೆ ಮುಗಿಯಿತು, ಶಿವನ ಮತ್ತು ರಾಜಿ ಪ್ರೇಮ, ಕಥೆ ಶುರುವಾಯಿತು ಅವರ ಜೀವನದ, ಹೊಸ ಕಥೆ...