ತುಂತುರು ಹನಿಗಳು

ತುಂತುರು ಹನಿಗಳು

ಕವನ

 

ನಾನು ಕೃಷ್ಣಾ....ಎಂದೆ
ಇವನು
ರಾಧಾ...ಎಂದ
ಪ್ರೇಮ ಬೆಳೆಯಿತು
ದಿನ ಕಳೆಯಿತು;
ಇವನಿಗೆ
ರುಕ್ಮಿಣಿಯೂ ಇದ್ದಾಳೆಂದು
ಈಗ ತಿಳಿಯಿತು
-ಮಾಲು 
 
*********
ಇವನಿಗೆ ನನ್ನ ಮೇಲೆ
ಮಹಾ ಪ್ರಾಣ
ಇದು ಇವರ ಮನೆಯವರ
ವಾದ;
ಅದಕ್ಕಾಗಿಯೇ
ನನಗೆ 
ಕೃತಜ್ಞ ನಾಗದೆ
ಕೃತಘ್ನ ನಾದ
-ಮಾಲು