ದಾಸ ಶ್ರೇಷ್ಠರು
ಕವನ
ಕುರುಬರ ಕುಲದಲಿ ಜನಿಸಿದರಿವರು
ಬೀರಪ್ಪ ಬಚ್ಚಮ್ಮ ಉದರದಲಿ
ತಿಮ್ಮಪ್ಪ ನಾಯಕ ನಾಮವು ಇವರದು
ದಂಡನಾಯಕರಾದವರು
ಸಮರದ ಕಣದಲಿ ಸೋಲನು ಕಾಣುತ
ಬದುಕಲಿ ಬಂದಿತು ವೈರಾಗ್ಯ
ದೇವರ ಮೇಲಿನ ಭಕ್ತಿಯು ತಂದಿತು
ಕೃಷ್ಣನ ಒಲುಮೆಯ ಸೌಭಾಗ್ಯ
ಉಡುಪಿಯ ಕೃಷ್ಣನ ದರ್ಶನ ಪಡೆಯಲು
ಬಂದರು ತುಂಬಿದ ಕಾತರದೆ
ಜಾತಿಯ ನೆಪದಲಿ ದೇಗುಲದೊಳಗಡೆ
ಹೋಗಲು ದೊರೆಯದ ಬೇಸರದೆ
ಹಿತ ಕೂತರು ಕನಕದಾಸರು
ಪಠಿಸುತಲಿದ್ದರು ಹರಿನಾಮ
ಭಕ್ತಿಗೆ ಮೆಚ್ಚಿದ ಕೇಶವನೊಲಿದನು
ತಿರುಗಿಸಿ ತನ್ನಯ ಮೊಗವನ್ನ
ಕನಕದಾಸರ ಹೆಸರದು ಮೆರೆದಿದೆ
ದಾಸಶ್ರೇಷ್ಟರ ಸಾಲಿನಲಿ
ಆದಿಕೇಶವ ಕಾವ್ಯ ನಾಮದಲಿ
ತೊಡಗುತ ಭಕ್ತಿಗೀತೆ ರಚನೆಯಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
