ಧನ್ಯತೆ
ಮಗನ ಅದ್ದೂರಿ ಮದುವೆ, ಬಂದುಗಳು, ಮನೆಯವರ ಸಡಗರ, ಆದ್ರೆ ಆ ತಾಯಿ ಕಣ್ಣಲ್ಲಿ ಮಾತ್ರ ತನ್ನವರನ್ನು ಹುಡುಕುತ್ತ ಇತ್ತು. ಗಂಡನ ಸಿರಿವಂತ ಕುಟುಂಬದಲ್ಲಿ ತಾನು ಮಾತ್ರ ಒಂಟಿ, ಕೇವಲ ಆಡಂಬರದ ಗೊಂಬೆ, ಅತ್ತೆಮನೆಯ ನೆಚ್ಚಿನ ಸೊಸೆ. ಆದರೆ ಕೇವಲ ಒಡವೆ, ಹಣದ ಮಧ್ಯೆ ತನ್ನ ಆತ್ಮೀಯ ಗೆಳತಿಯರೇ ಅವಳ ಆಸರೆ. ಸಿರಿ ಬಂದರೂ ಹಿಗ್ಗದೇ, ತನ್ನ ಲೋಕದ ಪರಿವೆಯಲ್ಲಿ ತನ್ನ ವರನ್ನು ಹುಡುಕಿತ್ತು, ಆ ಕಣ್ಣುಗಳು. ಗೆಳತಿಯ ಕಂಡೊಡನೆ ಕಣ್ಣಲ್ಲಿ ನೀರು, ಧನ್ಯತೆ, ಕೇವಲ ಕುಟುಂಬ, ಮನೆ, ಪರಿವಾರ ಅಲ್ಲದೇ ತಾನು ಕೂಡ, ಒಂದು ವ್ಯಕ್ತಿ, ತನಗೂ ವ್ಯಕ್ತಿತ್ವ ಇದೇ ಎಂದು, ಗೆಳತಿಯರ ಜೊತೆ ಇದ್ದಾಗ ಮಾತ್ರ. ಇದು ಕೇವಲ ಒಬ್ಬ ಹುಡುಗಿಯ ಹುಡುಕಾಟ ಅಲ್ಲಾ, ಎಷ್ಟೋ ಹೆಣ್ಣು ಮಕ್ಕಳು ಹೀಗೇ. ತನ್ನವರನ್ನು ನೋಡಿದಾಗ ಗೊತ್ತಿಲ್ಲದೇ ಕಣ್ಣುಗಳ ತುಂಬಾ ನೀರು, ಧನ್ಯತೆ,. ಕಳೆದು ಹೋಗದೇ ಮತ್ತೇ ತಾನು ನಗು ಮುಖ ಹೊತ್ತು ಮದುವೆ ಮುಗಿಸಿದಳು.
-”ಗಾಯತ್ರಿ”
ಚಿತ್ರ ಕೃಪೆ: ಇಂಟರ್ನೆಟ್ ತಾಣ