ನಗು ಬಂದರೆ??? ನಕ್ಕು ಬಿಡಿ...

ನಗು ಬಂದರೆ??? ನಕ್ಕು ಬಿಡಿ...

ಮಿಂಚಂಚೆಯಲ್ಲಿ ಬಂದದ್ದು...

 

೧) ಪ್ರಶ್ನೆ - ಜಾಕ್ ಮರದಿಂದ ಕೆಳಗೆ ಬಿದ್ದನು - ಇದು ಯಾವ ಕಾಲ ?

ಉತ್ತರ - ಜಾಕ್ ಗೆ ಕೆಟ್ಟ ಕಾಲ.

೨) ಪ್ರಶ್ನೆ - ಅಕ್ಬರನು ಸಿಂಹಾಸನ ಏರಿದ ಕೂಡಲೇ ಏನು ಮಾಡಿದನು?

ಉತ್ತರ - ಕುಳಿತುಕೊಂಡನು.

 ೩) ಪ್ರಶ್ನೆ - ವಾಸ್ಕೋ ಡ ಗಾಮ ಭಾರತದಲ್ಲಿ ಮೊದಲನೇ ಹೆಜ್ಜೆ ಇತ್ತ ತಕ್ಷಣ ಏನು ಮಾಡಿದನು?

ಉತ್ತರ- ಎರಡನೇ ಹೆಜ್ಜೆ ಇಟ್ಟನು.

೪) ಪ್ರಶ್ನೆ - ಸತ್ಯ ಹರಿಶ್ಚಂದ್ರ ಕಥೆಯಿಂದ ತಿಳಿಯಬೇಕಾದ ನೀತಿ ಏನು?

ಉತ್ತರ - ಕಷ್ಟಗಳು ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.

೫) ಪ್ರಶ್ನೆ - ಗಂಡಾಂತರಕಾರಿ ಕೆಲಸ - ಇದನ್ನು ಆಂಗ್ಲಕ್ಕೆ ಅನುವಾದಿಸಿ

ಉತ್ತರ - Husband brings Vegetable

೬) ಪ್ರಶ್ನೆ - "ಭಾರ್ಯ ರೂಪವತಿ ಶತ್ರು " - ಹೀಗೆಂದು ಹೇಳಿದವರು ಯಾರು?

ಉತ್ತರ - ಸುಂದರ ಹೆಂಡತಿ ಇಲ್ಲದಿದ್ದವರು.

೭) ಪ್ರಶ್ನೆ - ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಏನು ಹಾಕಬೇಕು?

ಉತ್ತರ - ಕೈ ಹಾಕಬೇಕು

 

ಆಂಗ್ಲದಿಂದ ಕನ್ನಡಕ್ಕೆ ಅನುವಾದ

ಆಂಗ್ಲ - I will be delivering my speech

ಕನ್ನಡ - ನಾನು ನನ್ನ ಭಾಷಣವನ್ನು ಹೆರುತ್ತೇನೆ..

ಆಂಗ್ಲ - Last leg of election is going on

ಕನ್ನಡ- ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ

ಆಂಗ್ಲ- There lies the Point

ಕನ್ನಡ - ಅಲ್ಲಿ ಮಲಗಿದ್ದಾಳೆ ಬಿಂದು.

 

 

Comments