ನನ್ನ ಮನದ ಪ್ರೀತಿಯ........

ನನ್ನ ಮನದ ಪ್ರೀತಿಯ........

ಕವನ

ಓ ಇನಿಯ, ಎಲ್ಲಿರುವೆ ನೀನು?

ನಿನಗಾಗಿ ಕಾದಿರುವೆ ನಾನು,

ರಾಮನ ದರ್ಶನಕ್ಕೆ ಕಾದ ಶಬರಿಯಂತೆ.

ನೀನೇಕೆ ತಿಳಿಯುತ್ತಿಲ್ಲ ನನ್ನ ಮನದ ಪ್ರೀತಿಯ?

ನಿನ್ನ ಪ್ರೆತಿಗಾಗಿ ಹಂಬಲಿಸಿ

ಕಾಯುತ್ತಿದೆ ಈ ನನ್ನ ಹೃದಯ.


ನೀನಿಲ್ಲದೆ ಬರಡಾಗಿರುವ ಈ ಮನಸಲ್ಲಿ

ಪ್ರೀತಿಯ ಒಯಾಸಿಸ್ಸನ್ನು ತರಬಾರದೇ?..

ಪ್ರೀತಿಯ ಚಿಲುಮೆಯಲ್ಲಿ ಮಿಂದು ಪುಳಕಗೊಳ್ಳಲು

ಕಾತರಿಸುತ್ತಿದೆ ಈ ನನ್ನ ಜೀವ.

.