ನನ್ನ ಮನಸ್ಸಿನ ಅಜ್ಞಾನ

ನನ್ನ ಮನಸ್ಸಿನ ಅಜ್ಞಾನ

ಬರಹ

ನಾನು ಬಹಳ ಗೊಂದಲದಲ್ಲಿ ಬಿದ್ದಿರುವ ಬಾವುಕ ಮನಸ್ಸುವುಳ್ಳವನ್ನು , ಒಂದೊಂದು ಸಲ ಬಹಳ ಸೌಜನ್ಯವುಳ್ಳ ವ್ಯಕ್ತಿಯಂತೆ ತೋರುತ್ತೇನೆ , ಮತ್ತೊಂದು ಸಲ ತುಂಬಾ ಕ್ರೂರ ವ್ಯಕ್ತಿಯಂತೆ, ನನ್ನ ಮನಸ್ಸಿನಲಿ ಎಲ್ಲಿಲ್ಲದ ಆಸೆಗಳನ್ನು, ಅದನ್ನ ತಣಿಸಲು ಪಡಬಾರದ ಕಷ್ಟಗಳನ್ನು ಅನುಭವಿಸುತ್ತೇನೆ ನನಗೆ ಏನಾಗುತ್ತಿದೆ ಎಂಬುದರ ಪರಿಜ್ಞಾನವಿಲ್ಲದೇ, ಆದರೂ ಅದರಿಂದ ನನ್ನನ್ನು ತಪ್ಪಿಸಿಕೊಳ್ಳಲು ಅಸಾದ್ಯವಗಿದೆಂದು ತೋರುತಿದೆ , ಏಕೇ ಈ ರೀತಿಯ ಬಂದನ ? ಏಕೇ ಈಂತಾ ಪರಿಸ್ಥಿತಿ ಎಂಬ ಯೋಚನೇ ನನ್ನ ಅಂತರಂಗವನ್ನು ವಿಶ್ಲೀಷಿಸಿಸುತ್ತಿದ್ದೆ, ಅದಕ್ಕೆಲ ಒಂದೇ ಉತ್ತರ ನನ್ನ ಮನಸ್ಸಿನ ನೀಜಸ್ವರುಪವನ್ನರಿಯದ ನನ್ನ ಮನಸ್ಸು, ಇದೇ ನನ್ನ ಎಲ್ಲಾ ಕಷ್ಟಪರಂಪರೆಗಳಿಗೂ ಕಾರಣ !!!

ಕುಡುಕನೊಬ್ಬ ಅದರ ಅಮಲಿನಲ್ಲಿ ತನ್ನ ನೆರಳೇ ತಾನೇಂದುಕೊಳ್ಳುತ್ತಾನೆ ತಾನು ರಸ್ತೆಯಲ್ಲಿ ಬಿದ್ದಿರುವೆನೇಂದುಕೊಳ್ಳುತ್ತಾನೆ , ಎಲ್ಲಾ ವಾಹನಗಳು ತನ್ನ ಮೇಲೆ ಹರಿದುಹೋಗುತ್ತಿದೆ , ತನ್ನನ್ನು ಪಾದಾಚಾರಿಗಳು ತುಳಿದುಕೊಂಡು ಹೋಗುತ್ತಿದ್ದಾರೆ , ತನಗೆ ಏಳುವುದಕ್ಕು ಸಾದ್ಯವಾಗುತ್ತಿಲ್ಲಾ , ಯಾರೋ ರಸ್ತೆಯ ಬದಿಗೆ ಎಳೆದು ಹಾಕುತ್ತಿದ್ದಾರೆ , ತಾನು ಅದನ್ನು ನೋಡುತ್ತಿದ್ದರು ಅಸಹಾಯಕನಂತೇ ವಿಲಿವಿಲಿ ಒದ್ದಾಡುತ್ತಿರುತ್ತೇನೆ , ತನ್ನ ನೆರಳುನ್ನು ತಾನೇಂದು ಭ್ರಮಿಸಿದಕ್ಕೇ ಈ ರೀತಿಯೇ .

ಕನಸಿನಲ್ಲಿ ನನ್ನ ನಿಜಸ್ವರುಪವನ್ನು ಮರೆತು , ಅಲ್ಲಿ ನಡೆಯುವ ಘಟನೆಗಳ ಪರಿಣಾಮದಿಂದ ಅತ್ಯಂತ ಸುಖದಿಂದ ಪೇಚಾಡುತ್ತೇನೆ ಅದರೆ ಕನಸಿನಿಂದ ಏಚ್ಚೇತ್ತೂ ನಾನು ಕಂಡಿದ್ದು ಬರಿಯ ಕನಸು ಎಂದ ಕುಡಲೇ ತನ್ನ ಎಲ್ಲಾ ಸುಖವೆಲ್ಲಾ ಮರುಗಳಿಗೆಯೇ ಮಾಯಾವಾಗುವುದು ,
ಕುಡುಕನೊಬ್ಬ ತನ್ನ ಅಮಲಿನಿಂದ ಯಾವಯಾವುದನೊ ಏನೇಂದು ಬಾವಿಸಿ ಭಯದಿಂದ ನಡುಗುವನು , ಹುಚ್ಚನೊಬ್ಬ ತನ್ನ ಉದ್ರಿಕ್ತಮನಸಿನ ಉಲ್ಬಣಪರಿಸ್ಥಿತಿಯನ್ನು ಸೃಷ್ಟಿಸಿಕೊಂಡು ಹುಚ್ಚಾಪಟ್ಟೆ ಕುಗಾಡುವನು , ಕಷ್ಟಪಡುವನು , ಅದೇ ರೀತಿ ನಾನು ನನ್ನ ಮನಸ್ಸಿನನಿಜಸ್ವರುಪವನ್ನು ಮರೆತು ನನ್ನ ಏಲ್ಲಾ ಕಷ್ಟ, ದುಖಗಳನ್ನು ರಾಶಿ ರಾಶಿಯಾಗಿ ಕೂಡಿಹಾಕಿಕೊಳ್ಳುತ್ತಾ ಅವುಗಳ ಒತ್ತಡದಿಂದ ದಿಕ್ಕು ತೋರದೇ ಸಂಕಟಪಡುತ್ತೇನೇ , ಇದೂ ನಾನು ಪಡೆದುಕೊಂಡ ಅಜ್ಞಾನ ಅದಕ್ಕಾಗಿ ನಾನು ಬೇರೆ ಯಾರನ್ನು ದೂಷಿಸುವಂತಿಲ್ಲ.

ನಾವು ಸಿನಿಮ ನೋಡುತ್ತಿರುವಾಗ ಆ ಚಿತ್ರದ ನಾಯಕ ನಾಯಕಿರೊಡನೆ ತಮ್ಮ ಅನನ್ಯತ್ವವನ್ನು ಕಲ್ಪಿಸಿಕೊಂಡು ಅವರ ಸುಖದುಖಗಳನ್ನು ಅನುಭವಿಸುತ್ತ ಅವರೊಂದಿಗೆ ನಗುತ್ತೇವೆ ಅಳುತ್ತೇವೆ , ಅದೇ ರೀತಿಯಾ ತಪ್ಪುಕಲ್ಪನೆಗಳಿಂದ ಹುಟ್ಟುಸಾವುಗಳಿಲ್ಲಿದ ನಮ್ಮ ಮನಸ್ಸು ಹುಟ್ಟುವುದೆಂದು , ಸಾಯುವುದೆಂದು , ಕಷ್ಟಪಡುವುದೆಂದು ಬಾವಿಸಿಕೊಂಡು ತಮಗೇ ತವೇ ವ್ಯಥೆಗೆ ಈಡುಮಾಡಿಕೊಳ್ಳುತ್ತೆವೆ , ಯಾವುದು ಇರಲಿಲ್ಲವೋ ಯಾವುದು ಇರುವುದಿಲ್ಲವೋ ಆದರೇ ಇದ್ದಂತೆ ತೋರುತ್ತದೆಯೋ ಅದನ್ನೆ "ಮನಸ್ಸು" ಎಂದುಕೊಳ್ಳುತ್ತೇವೆ.

ಈಗೆಯೇ ನನ್ನ ಬ್ರಾಂತಿ , ನನಗೆ ಒದಗಿರುವ ಸಂಕಟಗಳಲ್ಲಾ ನನ್ನ ಭ್ರಮೆಯಿಂದ ಉಂಟಾಗಿರುವುದು. ನಾನು ಬಂದನದಲ್ಲಿ ಸಿಕ್ಕಿಬಿದ್ದಿರುವುದು , ನನ್ನ ಈ ಏಲ್ಲಾ ವ್ಯಥೆಯಾನ್ನು ನಾಶಮಾಡಬೇಕಾದರೇ , ನನ್ನ ಬ್ರಾಂತಿಜ್ಞಾನವನ್ನು ಕಡಿದುಹಾಕಬೇಕು ಅಗ ನನ್ನ ದುಖಸಂಕಟಗಳೆಲ್ಲಾ ನಿರ್ನಾಮವಾಗುತ್ತವೇ ಅಗ ನಾನು ಬಂದಮುಕ್ತನಾಗುತ್ತೇನೆ......