ನಮಗಾರು ಸಾಟಿ

ನಮಗಾರು ಸಾಟಿ

ಕವನ

ಕರುನಾಡ ಸಿರಿದೇವಿ ಭುವನೇಶ್ವರಿ

ಮಡಿಲನು ನೀಡಿ ಬೆಳೆಸಿದ ತಾಯಿ

ಕಾಪಾಡು ನಮ್ಮ||

 

ಸವಿಜೇನ ನುಡಿಮುತ್ತು ಇದು ನಮ್ಮದು

ಕರುಣದಲಿ ಈ ತಾಯಿ ನಮಗಿತ್ತುದು

ಉಳಿಸುವುದು ಬೆಳೆಸುವುದು ಹೊಣೆ ನಮ್ಮದು

ಕನ್ನಡದೆ ಮಾತಾಡು ದಿನನಿತ್ಯವು

 

ಮುಕ್ಕೋಟಿ ದೇವರಿರೆ ಭಯವೆಲ್ಲಿದೆ

ಸಾಹಿತ್ಯ ಸಿಂಚನದ ಕಂಪಿಲ್ಲಿದೆ

ಶಿಲೆಯಲ್ಲಿ ಅರಳಿರುವ ಕಲೆ ಇಲ್ಲಿದೆ

ಜನಪದದ ಸೊಬಗಿಲ್ಲಿ ನೆಲೆಯಾಗಿದೆ

 

ಹಸಿರಾದ ಕಾನನವು ಉಸಿರೀವವು

ಧುಮ್ಮಿಕ್ಕಿ ಮನಸೆಳೆವ ಜಲಪಾತವು

ವಿಶ್ವದಲಿ ಪ್ರಖ್ಯಾತ ಅಸಮಾನ್ಯರು

ಈ ತಾಯ ಮುಕುಟಕ್ಕೆ ಮಣಿಯಿತ್ತರು

 

ನಾವಿಲ್ಲಿ ಜನಿಸಿಹೆವು ಇದು ಪುಣ್ಯವು

ಈ ತಾಯ ಮಡಿಲಿನಲಿ ಬೆಳೆದಿರುವೆವು

ನಮಗಾರು ಸರಿಸಾಟಿ ಈ ಜಗದಲಿ

ಈ ನಮ್ಮ ಹೆಮ್ಮೆಯಿದು ಚಿರವಾಗಲಿ ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್