ನಮ್ಮ 'ಆಧುನಿಕ ದಿವಾನ್ಖಾನೆಗಳನ್ನು ಶೃಂಗರಿಸುವ ಮಣ್ಣಿನ ವೈಭವ' !

ನಮ್ಮ 'ಆಧುನಿಕ ದಿವಾನ್ಖಾನೆಗಳನ್ನು ಶೃಂಗರಿಸುವ ಮಣ್ಣಿನ ವೈಭವ' !

ಬರಹ

ಮೊನ್ನೆ, ಗೆಳೆಯರೊಬ್ಬರಿಗೆ, ಅವರನ್ನು ವಿದಾಯಗೊಂಡ ಸಮಯದಲ್ಲಿ ಪ್ರೆಸೆಂಟ್ ಮಾಡಲು ' ಲ್ಯಾಂಪ್ ಶೇಡ್ ' ಒಂದನ್ನು ಖರೀದಿಸಲು ಹೋದಾಗ, ಅದು 'ಟೆರಾಕೋಟದಲ್ಲಿ ಮಾಡಿದ್ದೆಂದು,' ತಿಳಿದುಬಂತು. ಅಬ್ಬಾ.. ಅದೆಷ್ಟುಬಗೆಯ ಲ್ಯಾಂಪ್ ಶೇಡ್ ಗಳು. ಅತಿ ಬೇಡಿಕೆಯ ವಸ್ತುಗಳಲ್ಲಿ ಒಂದಾದ, ಟೆರಾಕೋಟ ನಿರ್ಮಿತಿ -ಲ್ಯಾಂಪ್ ಶೇಡ್ ! ಅಷ್ಟೇ ಅಲ್ಲ. ಕಾಫೀ-ಕಪ್, ಅಥವಾ ಬಟ್ಟಲುಗಳು, ಮತ್ತೆ ಅಡುಗೆಮನೆಯಲ್ಲಿ ಬಡಿಸುವ ಪಾತ್ರೆಗಳು, ದೊಡ್ಡ-ಪಾತ್ರೆಗಳು, ತಟ್ಟೆಗಳೂ ಟೆರಾಕೋಟದಲ್ಲಿ ಬರುತ್ತಿವೆ. ಅಲಂಕಾರಿಕ ಹೆಂಚುಗಳು, ಮ್ಯೂರಲ್ ವಿನ್ಯಾಸಮಾಡಲು ಉಪಯೋಗಿಸುತ್ತಾರೆ. ಏನಿದು, 'ಟೆರಾಕೋಟಾ,' ಅಂದರೇನು ?

ಟೆರಾಕೋಟದಲ್ಲಿ ಬಳಸುವ ಮೂಲವ್ಯಂಜನ, ಕೇವಲ ಜೇಡಿ-ಮಣ್ಣು ಎಂದರೆ, ಆಶ್ಚರ್ಯವಾಗುತ್ತದೆ. ಬಂಗಾಳಕೊಲ್ಲಿಯಲ್ಲಿ ಸಿಗುಗ ನವಿರಾದ ಜಿಗುಟು-ಜಿಗುಟಾದ-ಗಟ್ಟಿ-ಜೇಡಿಮಣ್ಣು, ಟೆರಾಕೋಟ, ಹೆಸರಿನಿಂದ ಸುಪ್ರಸಿದ್ಧವಾಗಿದೆ. ಹಿಮಾಲಯದಿಂದ, ಸಾವಿರಾರು ಮೈಲಿ ದೂರದಾರಿಯಲ್ಲಿ ಪ್ರವಹಿಸುವ, ಗಂಗಾಮಾತೆ, ಕೊಲ್ಕತ್ತಾದಲ್ಲಿ ಹೂಗ್ಲಿನದಿಯಾಗಿ, ಬಂಗಾಳಕೊಲ್ಲಿಯಲ್ಲಿ ಧುಮುಕಿ, ತನ್ನ ಪಯಣವನ್ನು ಸಮಾಪ್ತಿಗೊಳಿಸುವ ಸಮಯದಲ್ಲಿ, ಲಕ್ಷಗಟ್ಟಲೆ ಟನ್ ನುಸಿಮಣ್ಣನ್ನೂ ತನ್ನಜೊತೆ ಹೊತ್ತುತರುತ್ತಾಳೆ. ಅದೇ, ಬಂಗಾಳದ ಚಿನ್ನ-ಟೆರಾಕೋಟ ಜೇಡಿಮಣ್ಣು, ಟೆರಾಕೋಟ ! ಬಂಗಾಳದ ಮನೆಮನೆಗಳಲ್ಲೂ ಒಂದಲ್ಲ ಒಂದುರೀತಿಯ ಟೆರಾಕೋಟ ಕಲಾಕೃತಿಗಳು, ದೀವಾನಖಾನೆಯ ಶೋಭೆಯನ್ನು ಹೆಚ್ಚಿಸುತ್ತವೆ. ನಮ್ಮ ಭಾರತೀಯ ಸಿಂಧುನದಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬೆಳೆದ ಈ ಕಲಾವೈಭವ, ಹರಪ್ಪಾ ಹಾಗೂ ಮೊಹೆಂಜೋದಾರೋ ಉತ್ಖನದದಲ್ಲಿ ದೊರೆತಿದ್ದವು. ಒಡವೆಗಳು ಆಟಿಕೆವಸ್ತುಗಳು, ವಾಝ್ ಗಳರೂಪದಲ್ಲಿ ದೊರೆತ ಈ ವೈವಿಧ್ಯಮಯ ಕಲಾವಸ್ತುಗಳು ವಿಶ್ವದ ಜನರಮನಸ್ಸನ್ನು ಸೆಳೆದವು. ಟೆರಾಕೋಟ, ಬಂಗಾಳದ ಸಂಸ್ಕೃತಿಯ ಭಾಗವಾಗಿ ಅಥವಾ ಅಲ್ಲಿನ ಆಸ್ತಿಯಾಗಿ, ತಮ್ಮ ಸ್ಥಾನವನ್ನು ಖಾಯಂಗೊಳಿಸಿವೆ. ಟೆರಾಕೋಟ ವಸ್ತುಗಳು, ಅಧುನಿಕ ಮನೆಗಳ ದಿವಾನ್ ಖಾನೆಗಳ ಸೌಂದರ್ಯವನ್ನು ಇಮ್ಮಡಿಸಿವೆ.

ಟೆರಾಕೋಟ ಮೂಲಸ್ಥಾನ, ಬಂಕುರಾ ಜಿಲ್ಲೆ. ಇದರ ಹತ್ತಿರವಿರುವ, ವಿಷ್ಣುಪುರದಲ್ಲಿ, ಭಾರತಸರ್ಕಾರವು ವಿಶ್ವಪರಂಪರೆಯ ದರ್ಜೆ ನೀಡಿದ ದೇವಸ್ಥಾನವಿದೆ. ಇದು, ವಿಶ್ವಪರ್ಯಟಕರ ಪಟ್ಟಿಯಲ್ಲಿ ದಾಖಲಾಗಿದೆ. ಮೊದಲು, ಮಣ್ಣನ್ನು ಹದಗೊಳಿಸುವ ಕೆಲಸ ಅತಿಶ್ರಮದಾಯಕವಾಗಿರುತ್ತದೆ. ಮಣ್ಣಿನ ಹದದಬಗ್ಗೆ ಸಾಕಷ್ಟು ತಿಳುವಳಿಕೆ ಅಗತ್ಯ. ಬೇರೆಬೇರೆಬಣದ ಮಣ್ಣಿನಿಂದ ತಯಾರಿಸಿದ, ಟೆರಾಕೋಟ ಕಲಾಕೃತಿಗಳು ಬೇರೆಬೇರೆ ಬಣ್ಣದ್ದಾಗಿರುತ್ತದವೆ. ಇದರಜೊತೆಗೆ ಸ್ವಲ್ಪ ಹದದಲ್ಲಿ ವ್ಯತ್ಯಾಸವಾದರೂ ಕೊನೆಯ ಪದಾರ್ಥದ ಗುಣಮಟ್ಟದಲ್ಲಿ ಏರು-ಪೇರಾಗುವ ಸಂದರ್ಭವಿದೆ. ಕೆಲವುವೇಳೆ ಮಣ್ಣನ್ನು ಪ್ರೋಸೆಸ್ ಕೂಡಾ ಮಾಡಬೇಕಾಗಬಹುದು. ಬಹಳ ಸಮಯತಗಲುವ ಕೆಲಸವಿದು. ಮಣ್ಣಿನಲ್ಲಿ ಬೇರೆ ಪದಾರ್ಥಗಳಿರಬಾರದೆಂದು, ಮತ್ತೆ-ಮತ್ತೆ, ತೊಳೆದು ಶುದ್ಧಿಗೊಳಿಸಿ ಹದಗೊಳಿಸಲಾಗುತ್ತದೆ.

ಟೆರಾಕೋಟವಸ್ತುಗಳನ್ನು ತಯಾರಿಸುವಾಗ ಮಾಡಬೇಕಾದ ಮಣ್ಣಿನ ಹದ-ವಿಧಾನಗಳು :

ಬಂಗಾಳ ಈ ಭಾಗದಲ್ಲೇ ದೊರೆಯುವ ವಿಶೇಷವಾಗಿ ಸಿಗುವ, ಗಟ್ಟಿಮಣ್ಣಿನಲ್ಲಿ ಕಲಾಕೃತಿಗಳನ್ನು ತಯಾರಿಸಿ, ಕೋಣೆಯತಾಪಮಾನದಲ್ಲಿ ಒಣಗಿಸಲಾಗುವುದು. ಈಕೆಲಸ ಅತ್ಯಂತ ಜಾಗರೂಕತೆಯಿಂದ ಮಾಡದಿದ್ದರೆ, ಬಿರುಕುಬಿಡುವ ಸಾದ್ಯತೆಗಳಿವೆ. ತದನಂತರ, ಬೆಂಕಿಯಲ್ಲಿ ೮೭೫ ರಿಂದ ೯೨೫ ಸೆಂಟಿಗ್ರೇಡ್ ತಾಪಮಾನದಲ್ಲಿ ಬೇಯಿಸಿ ಗಟ್ಟಿಮಾಡುತ್ತಾರೆ.

ಬಂಗಾಳದ ಸುಪ್ರಸಿದ್ಧ ಮಾಲ್ ನಿಂದ ಹಿಡಿದು, ಅಲ್ಲಿಯ ಗ್ರಾಮಗಳ ಜಾತ್ರೆಗಳಲ್ಲೂ ಟೆರಾಕೋಟ ಸಾಮಗ್ರಿಗಳು ಸಿಗುತ್ತವೆ. ಮನೆಯ ಒಳಾಂಗಣದ ವಿನ್ಯಾಸಕಾರರು, ಟೈಲ್ಸ್ ಗಳನ್ನು ಅನೇಕಪ್ರಕಾರದಲ್ಲಿಯೂ ಟೆರಾಕೋಟ ಬಳಸುತ್ತಿದ್ದಾರೆ. ಒಡವೆಗಳು, ಕೂಡಾ ಜಂಕ್ ಜ್ಯೂವೆಲರಿಯ ತರಹ ಜನರಮನಸೆಳೆದಿವೆ. ಟೆರಾಕೋಟ-ಮಕ್ರೋವೇವ್ ಪ್ರೂಫ್ ಪಾತ್ರೆಗಳು, ಈಗಿನ ಟೆರಾಕೋಟ, ಆಧುನಿಕ ನಮನೆಯ ಕಿಚನ್ ಸಂಭ್ರಮ-ಡ್ರಾಯಿಂಗ್ ರೂಂನಿಂದ ಡ್ರೆಸಿಂಗ್ ಟೇಬಲ್, ಹಾಗೂ ಅಡುಗೆಮನೆಯವರೆಗೆ, ತನ್ನ ವ್ಯಾಪ್ತಿಯನ್ನು ಪಸರಿಸಿದೆ.

ಈಗಿನದಿನಗಳಲ್ಲಿ ವಿಶ್ವದಾದ್ಯಂತ, ಗ್ರಾಹಕರು, 'ಪರಿಸರಸ್ನೇಹಿ' ಅಥವಾ 'ಇಕೋ ಫ್ರೆಂಡ್ಲಿ ' ವಸ್ತುಗಳ ಬಗ್ಗೆ ಆದ್ಯತೆ ನೀಡುತ್ತಿರುವುದರಿಂದ, ಟೆರಾಕೋಟ ಮಾಲ್ ಗಳಲ್ಲಿ ಖರೀದಿಸದೆ ಸಾಧಾರಣವಾದ ಅಂಗಡಿಗಳಲ್ಲಿ ಕೊಂಡ ವಸ್ತುಗಳು ಅಷ್ಟೇನು ದುಬಾರಿಯಾಗಿರುವುದಿಲ್ಲ.

ಬಾಳೆ ಎಲೆಯಮೇಲೆ, ನಮ್ಮ ದಕ್ಷಿಣಭಾರತದಶೈಲಿಯ ’ಥಾಲಿ ಊಟ,’ ವನ್ನು ಮಾಡುತ್ತಿರುವಾಗ, ಪುಟ್ಟ ಬಟ್ಟಲಿನಲ್ಲಿ, ಪಾಯಸವೋ ಅಥವಾ ಪಲ್ಯವೋ ಬಡಿಸಿರಿ. ಟೆರಾಕೋಟ-ಮಣ್ಣಿನ ಬಟ್ಟಲಿನಲ್ಲಿ ನೀರುಕುಡಿಯಿರಿ. ಆಗ ನಿಮಗಾಗುವ ಸಂತೋಷವನ್ನು ಎಲ್ಲರೊಡನೆ ಹಂಚಿಕೊಳ್ಳಿ. ಆಗ ನಿಮಗೆ ತಿಳಿಯುವುದು, ಬಂಗಾಳದ ವಿಶೇಷ- ಟೆರಾಕೋಟದ ಮಹತ್ವ !

-ಚಿತ್ರದಲ್ಲಿ ’ಟೆರಾಕೋಟಾ’ ದೇವಸ್ಥಾನ ಪ. ಬಂಗಾಲದಲ್ಲಿದೆ.