ನಾರಾಯಣ ಕಟಾರ್

ನಾರಾಯಣ ಕಟಾರ್

ಬೇಕಿರುವ ಸಾಮಗ್ರಿ

ಮೈದಾ ಹಿಟ್ಟು - ೩ ಕಪ್, ಸಕ್ಕರೆ - ೨ ಕಪ್, ತುಪ್ಪ - ೨ ಕಪ್, ಚಿಟಕಿ ಸೋಡಾ ಹುಡಿ, ಏಲಕ್ಕಿ ಹುಡಿ - ೧ ಚಮಚ, ಜಾಯಿಕಾಯಿ ಹುಡಿ - ಅರ್ಧ ಚಮಚ

ತಯಾರಿಸುವ ವಿಧಾನ

ತುಪ್ಪ ಹಾಗೂ ಸಕ್ಕರೆಗಳನ್ನು ಸೇರಿಸಿ ಸಕ್ಕರೆ ಕರಗುವವರೆಗೆ, ಚೆನ್ನಾಗಿ ಕಲಸಿಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಮೈದಾ ಹಿಟ್ಟು ಸೇರಿಸಿ ಕಲಸಿ. ನಂತರ ಏಲಕ್ಕಿ ಹುಡಿ, ಜಾಯಿಕಾಯಿ ಹುಡಿ, ಸೋಡಾಗಳನ್ನು ಸೇರಿಸಿ ಕಲಸಿ. ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪೇಡಾ ಗಾತ್ರದಲ್ಲಿ ತಟ್ಟಿ ತಟ್ಟೆಯಲ್ಲಿ ಬಿಡಿಬಿಡಿಯಾಗಿ ಇರಿಸಿ ಓವನ್ ನಲ್ಲಿ ಬೇಕ್ ಮಾಡಿ. ನಿಮ್ಮ ನಾರಾಯಣ ಕಟಾರ್ (ನಾನ್ ಕಟಾಯಿ) ರೆಡಿ.