ನಾ ಬರೆದ ಕವಿತೆಗಳು...
ಬರಹ
ಎನಂತ ನಾ ಬರೆಯಲಿ...? ಶಬ್ದಕೋಶವೇ ನನ್ನಲಿಲ್ಲ
ತಿಳಿದುದನ ನಾ ಬರೆಯುವೆ ತಿಳಿ ಕನ್ನಡವಲ್ಲ
ಮನದ ಮಾತು ಹೇಳುವೆನು ನಾ ಸುಳ್ಳನ್ನಲ್ಲ
ನಾ ಯಾರ ಪದಗಳ ಕದ್ದಿಲ್ಲ ನಾ ಕಳನಲ್ಲ
ಬರೆಯುವ ಆಸೆ ಮನದಲ್ಲಿ ತಿಳಿ ಹೇಳುವರಿಲ್ಲ
ಈ ಬರೆವ ಕಲೆಯಲ್ಲಿ ಗುರು ನನಗೆ ಯಾರಿಲ್ಲ
ಹೆಂಡತಿಯೆ ಸ್ಪೂರ್ತಿ, ಸ್ನೇಹಿತರೆ ನನಗೆಲ್ಲ
ನಾ ಬರೆದ ಕವಿತೆಗಳು ಮಾಮೂಲಿ ಅವೆಲ್ಲ...