ನಿಂತಲ್ಲೇ ನಿಲುವನೇ ಮನುಜ?
ಕವನ
ಸಖೀ,
ನೀನೀ ಮುನಿಸನಿಂದು ಮರೆತು ಬಿಡು
ನಗುತಲೆನ್ನ ಜೊತೆಗೆ ಮುಂದಡಿಯಿಡು
ನಕ್ಕು ಬಿಡು ನಗುವುದಕ್ಕಿರಲಿ ಜೀವನ
ಕೋಪಕ್ಕೆ ಇರಲಿ ದಿನದಿನವೂ ಮರಣ
ಈ ಬಿಗುಮಾನದಿಂದ ನಮಗೇ ಕೆಡುಕು
ಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು
ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್ಲ
ತಪ್ಪು ಎಸಗದವರೆಮ್ಮಲ್ಲಿ ಯಾರೂ ಇಲ್ಲ
ನಡೆದಾಡುವಾಗೆಡವುದು ಜೀವನ ಸಹಜ
ಹಾಗೆಂದು ನಿಂತಲ್ಲೇ ನಿಲುವನೇ ಮನುಜ
********
Comments
"ನಕ್ಕು ಬಿಡು ನಗುವುದಕ್ಕಿರಲಿ
"ನಕ್ಕು ಬಿಡು ನಗುವುದಕ್ಕಿರಲಿ ಜೀವನ
ಕೋಪಕ್ಕೆ ಇರಲಿ ದಿನದಿನವೂ ಮರಣ"
"ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್ಲ
ತಪ್ಪು ಎಸಗದವರೆಮ್ಮಲ್ಲಿ ಯಾರೂ ಇಲ್ಲ" ಸತ್ಯವಾದ ಮಾತು. ಸುಂದರವಾದ ಕವನ ಧನ್ಯವಾದಗಳೊಂದಿಗೆ......ಸತೀಶ್
ಚೆನ್ನಾಗಿದೆ.... ನಕ್ಕರೆ ಅದೇ
ಚೆನ್ನಾಗಿದೆ.... ನಕ್ಕರೆ ಅದೇ ಸ್ವರ್ಗ!