ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ
ಕವನ
ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-)
ಹೊಚ್ಚ ಹೊಸ ಪ್ರೀತಿಯಲಿ ಕೊಚ್ಚಿ ಹೋಗುವ ಮುನ್ನ
ಎಚ್ಚರದ ಮಾತೊಂದ ಕೇಳು ಗೆಳತಿ |
ಚುಚ್ಚು ಮಾತುಗಳಲ್ಲ ಬಿಚ್ಚು ಮನಸಿನ ನುಡಿಯು
ರೊಚ್ಚಿಗೆಬ್ಬಿಸಿದಲ್ಲಿ ಕ್ಷಮಿಸು ಗೆಳತಿ ||
ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ
ತುಚ್ಛ ಮಾತುಗಳೆಲ್ಲ ಕೇಳೀತು ನಿನಗೆ |
ಕೊಚ್ಚಿ ಹಾಕುವ ಕೋಪ ಕಿಚ್ಚು ಹಚ್ಚುವ ತಾಪ
ಮುಚ್ಚಿಬಿಡು ನಿನ್ನಯ ಮನದ ಒಳಗೆ ||
ಮೆಚ್ಚಿಗೆಯು ಇದ್ದಲ್ಲಿ ನೆಚ್ಚಿಗೆಯು ಇದ್ದಲ್ಲಿ
ಕೆಚ್ಚೆದೆಯು ನಿನ್ನೊಳಗೆ ಇರಲೇಬೇಕು |
ಮುಚ್ಚುಮರೆ ಒಳಿತಲ್ಲ ಬೆಚ್ಚುವುದು ಬೇಕಿಲ್ಲ
ಸಚ್ಚರಿತೆಯಲಿ ನಡೆವುದೊಂದೇ ಸಾಕು ||
ಬಚ್ಚಿಟ್ಟ ಕನಸುಗಳ ಬಿಚ್ಚಿಡುವವಳಾಗು
ನುಚ್ಚು ನೂರಾಗುವ ಭಯ ಬೇಡ ನಿನಗೆ
ಸ್ವಚ್ಛ ಬದುಕಿಗೆ ನನ್ನ ಬೆಚ್ಚಗಿನ ಹಾರೈಕೆ
ಸಚ್ಚಿದಾನಂದನೇ ಬಾಳ ದೀವಟಿಗೆ ||
Comments
ಉ: ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ
In reply to ಉ: ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ by nagarathnavina…
ಉ: ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ