ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ಬರಹ

ಬೆಳಗಾಗಿ ನ್ಯೂಸ್ ಓದೋವಾಗ ಒಂದು [:http://www.ibnlive.com/news/emergency-pill-for-west-pharma-giant-indias-arrives/67029-7.html|ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ] ವೆಬ್ಸೈಟಿನ ಸುದ್ದಿಯೊಂದು ಹೀಗಿತ್ತು:

"India is emerging as a destination for high value R&D alongside the lower value manufacturing and clinical trial work for western pharmaceutical giants, says a study by US based academic Vivek Wadhwa."

"ಕ್ಲಿನಿಕಲ್ ಟ್ರಯಲ್" ನಡೆಸಲು ಭಾರತ ದೇಶ ನೆಲೆಯಾಗಿರುವುದು "emerging" ಅಥವ "high value" ಅನ್ನೋ ಪದಗಳ ಜೊತೆ ಮೂಡುವುದೇ ಸರಿಯಿಲ್ಲ. ಒಂದೊಮ್ಮೆ ಮೂಡಿದರೆ 'ಎಮರ್ಜಿಂಗ್' ಮತ್ತು 'ಹೈ ವ್ಯಾಲ್ಯೂ' ಎನ್ನುವುದು ಯಾರಿಗೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ! ಭಾರತ ಹೀಗೊಂದು "ಕ್ಲಿನಿಕಲ್ ಟ್ರಯಲ್" ಅಥವ ಹೊಂದಿಕೊಂಡಂತೆ "R&D" ನೆಲೆಯಾಗಿರುವುದು ಇಲ್ಲಿ ದುಡ್ಡು ಕೊಟ್ಟು ಪ್ರಯೋಗಗಳಿಗೆ ಬೇಕಾದುದನ್ನೆಲ್ಲವನ್ನೂ ಹೆಚ್ಚಿನ ತಲೆನೋವಿಲ್ಲದೆ ರೆಡಿಮಾಡಬಹುದಾಗಿರುವುದರಿಂದ ಅಷ್ಟೆ. ಪ್ರಯೋಗಕ್ಕೆ ಒಪ್ಪುವ ಬಡ ಪೇಶೆಂಟುಗಳು ಸಿಗುತ್ತಾರೆ. ಏನು ನಡೆಯುತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳದ ತಲೆಕೆಡಿಸಿಕೊಳ್ಳಬೇಕಾದವರು ಸಿಗುತ್ತಾರೆ. ತಮ್ಮ ಸ್ವಾರ್ಥಕ್ಕೆ ಯಾವುದೋ ಹೊಸ ಡ್ರಗ್ಗುಗಳನ್ನ ಏನೂ ಹಿಂಜರಿಕೆಯಿಲ್ಲದೇ ಬರೆದುಕೊಡುವ ಡಾಕ್ಟರರು ಸಿಗುತ್ತಾರೆ. ಡ್ರಗ್ ಕಂಪೆನಿಗಳ ಲಾಬಿ ಅಲ್ಲಿಲ್ಲಿ ಹೊರಬಂದ ದನಿಯನ್ನು ಹತ್ತಿಕ್ಕುವಷ್ಟು ಕ್ಷಮತೆಯುಳ್ಳದ್ದಾಗಿದೆ. ಹೀಗಿರುವಾಗ ಭಾರತದಲ್ಲಿ ಇವೆಲ್ಲ ನಡೆಯುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ.

ಪ್ರಯೋಗಗಳು ನಡೆವ ದೇಶದಲ್ಲೇ ತಮ್ಮ ರಿಸರ್ಚ್ ಕೂಡ ನಡೆಯುವುದರಿಂದ, ಡ್ರಗ್ ಮಾರ್ಕೆಟ್ಟಿನ ಎಡವಟ್ಟು ಸ್ಥಿತಿಯಲ್ಲಿರುವ ಭಾರತಕ್ಕೆ ಇನ್ನೂ ಎಡವಟ್ಟಾಗಿರುವ ಇದರ ಎಕಾನಮಿಗೆ ಆಶಾಕಿರಣವೆಂಬಂತೆ ರಿಸರ್ಚ್ ಸೆಂಟರುಗಳು ಸುಮಾರು ತಲೆ ಎತ್ತುತ್ತಿರುವುದು. ಇಲ್ಲಿ ಇನ್ನೆಲ್ಲೂ ಸಿಗದ ಬುದ್ಧಿವಂತರು ಸಿಗುತ್ತಾರೆ ಎಂಬ ಕಾರಣದಿಂದ ರಿಸರ್ಚ್ ಸೆಂಟರುಗಳು ಬರುತ್ತಿದೆ ಎಂದು ಮೀಡಿಯದವರು ಪ್ರೊಜೆಕ್ಟ್ ಮಾಡಿದರೆ ಅದು ನಂಬಲಸಾಧ್ಯ.

ಅದು ಹೋಗಲಿ, ನಾವು ಯಾವ ಭಾರತೀಯ ಕಂಪೆನಿಗಳ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ ಎಂದು ನೋಡಲು ಹೋದರೆ ಪ್ರತಿಯೊಂದೂ ಮಲ್ಟಿನ್ಯಾಶನಲ್. ಮೂಲ ಯಾವ ದೇಶದ್ದಾದರೇನು, ಕಂಪೆನಿಯೊಂದಕ್ಕೆ ದೇಶೀಯ ನಂಟು ಅದರ ಬೆಳವಣಿಗೆಯೊಂದಿಗೇ ನಶಿಸುತ್ತಹೋಗುತ್ತಿರುತ್ತದೆ. ನಿನ್ನೆ ತಾನೆ ಭಾರತದ ಅತಿ ದೊಡ್ಡ ಡ್ರಗ್ ಕಂಪೆನಿಗಳಲ್ಲೊಂದಾದ "Ranbaxy" ಜಪಾನಿನ 'Daiichi' ಕಂಪೆನಿಗೆ ಹೆಚ್ಚು ಕಡಿಮೆ ಮಾರಾಟವೇ ಆಗಿಹೋಗಿದೆ. ಇಷ್ಟು ದಿನ ಅಪ್ಪಿ ತಪ್ಪಿ 'ನಮ್ಮ ದೇಶದ ಕಂಪೆನಿ' ಎಂದುಕೊಂಡು ಬೆಂಬಲ ನೀಡಿದವರಿಗೆ ಪಂಗನಾಮ.

ಮೇಲಿನ ಐ ಬಿ ಎನ್ ಲೈ ವ್ ಲೇಖನದಲ್ಲೇ ಇದ್ದ ಈ ಪ್ಯಾರಾ ನೋಡಿ:

But as Indian companies have the most experience in selling generic drugs that meet FDA standards, India is playing a bigger role for western companies in drug research and development and could soon emerge as a major powerhouse in its own right.

ಇದರಷ್ಟು ಗಾಬರಿ ಹುಟ್ಟಿಸುವಷ್ಟು ಸುದ್ದಿ ಬೇರೊಂದಿಲ್ಲ. ಆದರೂ ಹೆಮ್ಮೆ ಮೂಡಿಸುವಂತೆ ಬರೆದಿರುವ ಇದರ ಹಿಂದಿನ ಸತ್ಯ, ನಿಜಸ್ಥಿತಿ ಜನರಿಗೆ ತಿಳಿದರಷ್ಟೇ ಉಳಿವು.

(ಇದೇ ವಿಷಯಕ್ಕೆ ಅಂದರೆ ಮಲ್ಟಿನ್ಯಾಶನ್ನುಗಳ ದೊಂಬರಾಟಕ್ಕೆ ಸಂಬಂಧಪಟ್ಟಂತೆ ಡಾ|| ಎಸ್ ಕಕ್ಕಿಲಾಯ ಬರೆದಿರುವ ಒಂದು ಬಹಳ ಉತ್ತಮವಾದ ಲೇಖನ ಇಲ್ಲಿದೆ ಓದಿ)