ನಿನ್ನೊಡನೆ ಪ್ರತಿದಿನ
ಕವನ
ಇಳಿಸಂಜೆ ಹೊತ್ತಲ್ಲಿ
ಸಾಗರದ ಅಂಚಿನಲಿ,
ನೀನೇಕೆ ಕೈಬೀಸಿ ಕರೆದೆ?
ಶಶಿ ಬೆಳಗೋ ಸಮಯದಲಿ
ತಂಗಾಳಿ ಅಲೆಯಲ್ಲಿ ,
ಪ್ರೇಮದಾ ಮಳೆಯಾಗಿ ಸುರಿದೆ.
ನಡುರಾತ್ರಿ ಚಳಿಯಲ್ಲಿ
ಕಗ್ಗತ್ತಲೊಡಲಲ್ಲಿ,
ನೀನೇಕೆ ದೂರಾಗಿ ಉಳಿದೆ?.
ಮುಂಜಾನೆ ಮಂಜಿನಲಿ
ರವಿ ಮೂಡೊ ವೇಳೆಯಲಿ,
ಮತ್ತೇಕೆ ಮೌನವನು ಮುರಿದೆ?.
ಉದಯದಾ ಸ್ಪರ್ಶದಲಿ
ಹೊಂಬಣ್ಣ ಕಿರಣದಲಿ,
ಮತ್ತದೇ ಕನಸಾಗಿ ಉಳಿದೆ!!
Comments
ಉ: ನಿನ್ನೊಡನೆ ಪ್ರತಿದಿನ
In reply to ಉ: ನಿನ್ನೊಡನೆ ಪ್ರತಿದಿನ by venkatb83
ಉ: ನಿನ್ನೊಡನೆ ಪ್ರತಿದಿನ
In reply to ಉ: ನಿನ್ನೊಡನೆ ಪ್ರತಿದಿನ by hvravikiran
ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ...
ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ... -ತುಳು ಇರ್ಬೇಕು ಅನ್ಸುತ್ತೆ...
ನಿಮಗೆ ಮದುವೆಯಾಗಿದಿಯೇ ರವಿಕಿರಣ್
ನಿಮಗೆ ಮದುವೆಯಾಗಿದಿಯೇ ರವಿಕಿರಣ್ ರವರೇ? ಅಥವಾ ಯಾರನ್ನಾದರೂ ಆಳವಾಗಿ ಪ್ರೀತಿಸುತ್ತಿದ್ದೀರ? ವೈಯಕ್ತಿಕ ಪ್ರಶ್ಹ್ನೆ ಕ್ಕೇಳಿದಕ್ಕೆ ಕ್ಷಮಿಸಿ
In reply to ನಿಮಗೆ ಮದುವೆಯಾಗಿದಿಯೇ ರವಿಕಿರಣ್ by harishsaniha
@harishsaniha:
@harishsaniha:
ಕನಸಿನ ಕನ್ಯೆ ಕಾಡಿದಾಗ :)