ನಿಮಗೆಲ್ಲಾ 'ಜಯ ನಾಮ ಸಂವತ್ಸರ'ದ ಹಾರ್ದಿಕ ಶುಭಾಶಯಗಳು !
ಯುಗಾದಿ ಹಬ್ಬವನ್ನು ಚಾಂದ್ರಮಾನ ಹಾಗೂ ಸೌರಮಾನರೀತಿಯಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ. ಈ ವರ್ಷ ಚಾಂದ್ರಮಾನ ರೀತಿಯಾಗಿ, ಚೈತ್ರ ಶುಕ್ಲ ಪ್ರತಿಪತ್, ತಾ : ೩೧ ನೆಯ ಮಾರ್ಚ್, ೨೦೧೪ ರ ಸೋಮವಾರದಂದು, ಆಚರಿಸಲಾಯಿತು.
ಸೌರಮಾನ ರೀತಿ ಆಚರಣೆ : ಸೂರ್ಯನು ನಿರಯಣ ಮೇಶರಾಷಿ ಪ್ರವೇಶಿಸುವ ಪುಣ್ಯಕಾಲದ ದಿನ ಅಂದರೆ ತಾ : ೧೪, ಏಪ್ರಿಲ್, ೨೦೧೪ ರ ಸೋಮವಾರದಂದು ಆಚರಿಸಲಾಗುತ್ತದೆ.
ದೇವತಾರ್ಚನೆಯ ಬಳಿಕ ಪಂಚಾಂಗ ಶ್ರವಣವನ್ನು ಮಾಡಬೇಕು. ನಂತರ ತೀರ್ಥ ಪ್ರಸಾದ ಸೇವನೆಯ ಸಮಯದಲ್ಲಿ ಇಂದು ಬೇವು-ಬೆಲ್ಲದ ಸೇವನೆ ಈದಿನದ ಮಹತ್ವದ ವಿಧಿಯಾಗಿದೆ.
ಹಾಗೆ ಸೇವಿಸುವಾಗ ಕೆಳಗಿನ ಮಂತ್ರವನ್ನು ಹೇಳಿಕೊಳ್ಳಬೇಕು :
ಶತಾಯುರ್ ವಜ್ರದೇಹಾಯ
ಸರ್ವ ಸಂಪತ್ ಕರಾಯಚ |
ಸರ್ವಾರಿಷ್ಟ ವಿನಾಶಾಯ
ನಿಂಬಕಂದಳ ಭಕ್ಷಣ |
(ಅಂದರೆ, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ ಬೇವು-ಬೆಲ್ಲಗಳ ಸೇವನೆ ಮಾಡುತ್ತೇನೆ)ಎಂದು ಹೇಳಿ ಸೇವಿಸತಕ್ಕದ್ದು.