ನಿರಂತರ ಕುಣಿತ!
ಬದುಕೆಂಬ ಸಂತೆ
ಉಟ್ಟುಡಲು ಚಿಂತೆ
ಮರೆಸಲು ಬೇಕಂತೆ
ಕಟ್ಟೇನೇನೆಲ್ಲ ಕಂತೆ!
ದೊಂಬರಾಟ ಡೋಲೆ
ನಿತ್ಯ ಜೀವನದ ಶೂಲೆ
ಕೋಲ ತೂಗಿದವರೆಷ್ಟೊ
ಕಾಲ್ಜಾರಿ ಸಾಗಿದವರೆಷ್ಟೊ!
ಇಡಿ ಜಗನ್ನಾಟಕ ರಂಗ
ನೋಡೆಷ್ಟೊಂದು ಪ್ರಸಂಗ
ಜಡಿಮಳೆಗು ಕುಸಿವ ಜಗ
ನೆಲೆ ಕಾಣುವುದ್ಯಾವಾಗ!
ಹರಕೆ ಆಲದಮ್ಮಾ ಮಾರಿ
ಭಯಕೆ ಕೈ ಕತ್ತೆಲ್ಲ ಪರಾರಿ
ಒಪ್ಪತ್ತಿದ್ದೂ ಕಟ್ಟಿರೆ ಮುಡಿಪು
ಹೊಟ್ಟೆಗಿಂತ ಹೊರಗುಡುಪು!
ಯಾರ ಹೆದರಿಕೆಗೊ ಕಾಣೆ
ಬದುಕೆ ಅವರಿವರ ಹೊಣೆ
ಅನುಭವಿಸಿದರೂ ಬವಣೆ
ಸರಿತಪ್ಪು ಅವನದೆ ತಾನೆ!
ನಮ್ಮ ನಮ್ಮಯಾ ಬದುಕು
ಬದುಕಲೂ ಎಷ್ಟಿವೆ ನೂಕು
ಬದುಕಬಿಡಬಾರದೆ ಬಾಳು
ಕಾಡುವಬುದ್ಧಿ ಮನೆಹಾಳು!
ಸಾಗಿದೆ ನಿರಂತರ ಕುಣಿತ
ಅವರಿವರೆಲ್ಲರ ಓಲೈಸುತ
ಅವ ಬರೆದಿಟ್ಟವನೆಲ್ಲ ಗಣಿತ
ನೋಡೆ ತುಟಿಯಂಚೆ ನಗುತ!
- ನಾಗೇಶ ಮೈಸೂರು, ಸಿಂಗಪುರದಿಂದ
Comments
<<ಅವ ಬರೆದಿಟ್ಟವನೆಲ್ಲ ಗಣಿತ
In reply to <<ಅವ ಬರೆದಿಟ್ಟವನೆಲ್ಲ ಗಣಿತ by Premashri
ಪ್ರೇಮಾಶ್ರಿಯವರೆ, ಗಣಿತ ಅವನದಾದರೂ
ನಮ್ಮ ಶಿಲ್ಪಿಗಳು ನಾವೇ! ನಮ್ಮ
In reply to ನಮ್ಮ ಶಿಲ್ಪಿಗಳು ನಾವೇ! ನಮ್ಮ by kavinagaraj
ಕವಿ ನಾಗರಾಜರೆ, ನಿಮ್ಮ ಮಾತು ನಿಜ.
"ಅವ ಬರೆದಿಟ್ಟವನೆಲ್ಲ ಗಣಿತ
In reply to "ಅವ ಬರೆದಿಟ್ಟವನೆಲ್ಲ ಗಣಿತ by venkatb83
ಸಪ್ತಗಿರಿಯವರೆ, ನಿಮ್ಮಂತಹವರ ಕೈಲಿ
ನಾಗೇಶಮೈಸೂರು ರವರಿಗೆ ನಮಸ್ಕಾರಗಳು
In reply to ನಾಗೇಶಮೈಸೂರು ರವರಿಗೆ ನಮಸ್ಕಾರಗಳು by partha1059
ನಾಗೇಶ್ ಅವರ ಪ್ರಾಸಬದ್ಧ ಕವಿತೆ
In reply to ನಾಗೇಶ್ ಅವರ ಪ್ರಾಸಬದ್ಧ ಕವಿತೆ by venkatb83
ಸಪ್ತಗಿರಿಗಳೆ ಪ್ರಾಸದ
In reply to ನಾಗೇಶಮೈಸೂರು ರವರಿಗೆ ನಮಸ್ಕಾರಗಳು by partha1059
ಪಾರ್ಥ ಸಾರ್ ನಮಸ್ಕಾರ. ನೀವ್ಹೇಳಿದ
In reply to ನಾಗೇಶಮೈಸೂರು ರವರಿಗೆ ನಮಸ್ಕಾರಗಳು by partha1059
ಪಾರ್ಥರೆ,-"ಕವನ" ಹೆಣ್ಣು.
In reply to ಪಾರ್ಥರೆ,-"ಕವನ" ಹೆಣ್ಣು. by ಗಣೇಶ
ಗಣೇಶ್ ಜಿ, ಕವನ ಹೆಣ್ಣು ಅನ್ನೊ