-ನಿರೀಕ್ಷೆ

-ನಿರೀಕ್ಷೆ

ಕವನ

 

ನೆನಪುಗಳು ಮಾಸದು 
ಕನಸಿನಾ ಹಾಗೆ!
ಗೆಳೆಯ, ನಾ ನಿನ್ನ 
ಮರೆಯುವುದು ಹೇಗೆ?!
 
ಬೊಗಸೆಯಲಿ ಭರವಸೆಯ 
ಹಿಡಿದು ತಂದವನೆ
ಬದುಕಿನಲಿ ನನ್ನೊಡನೆ 
ನಡೆವೆ ಎಂದವನೆ 
 
ನಿನ್ನ ಬರುವಿಕೆಗೆ ನಾ 
ಕಾಯುವೆನು, ಬಾರ 
ಸಂಗವಿರದಂಗನೆಯ 
ಬದುಕು ನಿಸ್ಸಾರ
-ಮಾಲು 
 
 

Comments