ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು?

ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು?

ಕವನ

 

 

 

ನೇಸರನು ಕಾಯಕವ ಮುಗಿಸಿ ಹೊರಡುತಿಹನು ಮನೆಗೆ

ನೀನೇಕೆ ದೂರ ಹೊರಡುತಿರುವೆ ನನ್ನ ಸಂ ತೊರೆದು

ನೇಸರನ ಕೆಂಪು ಮುಖ ಹೇಳುತಿದೆ ಕೋಪ ಂದಿದೆ

ನೇಸರನಿಗೆ  ಜಗದ ನಡೆ ನುಡಿಯ ಕಂಡು...

 

ಕಾಣುತಿಲ್ಲ ಎನಗೆ ನಿನ್ನ ವದನ ಈ ಕತ್ತಲಿನಲ್ಲಿ 

ಅದು ಕೋಪದಲಿ ಕೆಂಪಾಗಿದೆಯೋ ಇಲ್ಲವೋ ಎಂದು

ಮನ್ನಿಸಿಬಿಡು ನಾ ಮಾಡಿದ ತಪ್ಪುಗಳನ್ನು

ಕಡಲ ಅಲೆಗಳು ಮರಳ ಬರಹವನ್ನು ಅಳಿಸುವ ಹಾಗೆ...

 

ನಾವಾಗುವುದು ಬೇಡ ದೂರದಲಿ ಕಾಣುವ

ಆ ಕೆಂಪು ನೇಸರನು ಕಡಲಿನಲ್ಲಿ ಮುಳುಗುವ ಹಾಗೆ

ಏಕೆಂದರೆ ಅದು ನಿಜವಲ್ಲ ಗೆಳೆಯ ಅದು ಬರೀ ಮಿಥ್ಯ

ನಾವಾಗುವ ಎಂದೆಂದಿಗೂ ಕಡಲು ಹಾಗೂ ಮರಳಿನ ಹಾಗೆ...

 

ಚಿತ್ರಕ್ರುಪೆ ಃ ಅ೦ತರ್ಜಾಲ