ನೆನಪಿನಾಳದಿಂದ..
ಕವನ
ಸುಮ್ಮನೆ ಕುಳಿತಿಹೆ ನಿನ್ನ ನೆನಪಲಿ
ನೆನೆದು ನಿದ್ದೆ ಬಾರದೆ ಈ ರಾತ್ರಿಯಲಿ
ಕಳೆದು ಹೋದೆ ನಾನು ಮನದಲಿ
ಮನೆ ಮಾಡಿ ಉಳಿದೆ ನೀ ಪ್ರೀತಿಯಲಿ
ಸ್ನೇಹ ದ್ವೇಷ ನಾ ಕಾಣೆ ಭೂಮಿಯಲಿ
ಮಂಜು ಮುಸುಕಿದೆ ಬಾಳಿನಲಿ
ಕಾಯುವೆ ನಿನಗಾಗಿ ಹಗಲಿರುಳಲಿ
ಒಪ್ಪು ನೀ ನನ್ನ ಜೀವ ಸ್ನೇಹದಲಿ
ಹೇಳದೆ ಕಾರಣ ಹೋದೆ ದೂರದಲಿ
ಪ್ರೀತಿಸಿದೆ ನಿನ್ನ ಮನದ ಆಳದಲಿ
ನೀನಿಲ್ಲದೆ ನಾನೀಗ ಹೇಗೆ ಜೀವಿಸಲಿ
ತಬ್ಬಲಿಯಾದೆ ಸೋಜಿಗ ಜಗದಲಿ
ಬಾ ಒಮ್ಮೆ ಮುದ್ದಾದ ಕನಸಲಿ...