ನೇಗಿಲಯೋಗಿ ರೈತ (ಜಾನಪದಶೈಲಿ)

ನೇಗಿಲಯೋಗಿ ರೈತ (ಜಾನಪದಶೈಲಿ)

ಕವನ

ತಂದಾನಿ ತಾನೋ ತಂದಾನೋ/

ತಾನಿ ತಂದಾನೋ ತಂದಾನೋ/

ತಂದನ್ನ ತಾನನ ತಂದಾನೋ........//

 

ಮೂಡಣ ದಿಕ್ಕಲ್ಲಿ ರಂಗು ಚೆಲ್ಯಾನ/

ಸೂರ್ಯ ದ್ಯಾವ್ರು ಮ್ಯಾಲೆ ಬಂದಾನ/

ಅಣ್ಣಯ್ಯಾ/ಚುಮುಚುಮು ಚಳಿಯ ದೂರಮಾಡ್ಯಾನ//

 

ಹಕ್ಕಿಗಳ ಚಿಲಿಪಿಲಿ ಸುತ್ತಲು ಕೇಳೈತೆ/

ಕುಳಿರ್ಗಾಳಿ  ಸೊಂಯ್ ಎಂದು ಬೀಸೈತೆ/

ಅಣ್ಣಯ್ಯಾ/ಮನೆ ಹೈಕ್ಳು ಎದ್ದು ಕುಂತಾರ//

 

ರೈತಾಪಿ ಜನರು  ಬುತ್ತಿ ಕಟ್ಕೊಂಡು/

ಹೆಂಡಿರು ಮಕ್ಕಳ ಜೊತೆಯಾಗೆ/

ಅಣ್ಣಯ್ಯಾ/ಗಂಜಿಯ ಕುಡ್ದು ಹೊಂಟಾರ//

 

ಹೊಲದಲ್ಲಿ ಕಾಯಕವ ಗೈಯುತ್ತ /

ಉತ್ತುಬಿತ್ತಿ ಫಸಲು ಪಡಿತಾರ/

ಅಣ್ಣಯ್ಯಾ/ನೇಗಿಲಯೋಗಿ ರೈತ ಜನ//

 

ಬಿಸಿಲು ಮಳೆ  ಗಾಳಿಗೆ ಅಂಜದೆ/

ದಿನವಿಡಿ ದುಡಿತಾರ ಹೊಲದಲ್ಲಿ/

ಅಣ್ಣಯ್ಯಾ/ಅನ್ನದಾತರೆ ನಮ್ಮ ದ್ಯಾವಾರು//

 

ಬಯಲಲ್ಲಿ ಎಲ್ರೂನು ಜ್ವೊತೆಯಾಗೆ ಕುಂತು/

ರೊಟ್ಟಿ ಗಂಜಿ ಉಣುತಾರ/

ಅಣ್ಣಯ್ಯಾ/ಭೂಮಾತೆ ಸೇವೆ ಮಾಡ್ಯಾರ//

 

ಕರಿಮೋಡ ಎದ್ದ್ಯೆತೆ ಬಾನೆಲ್ಲ ಹರಡೈತೆ/

ಮಳೆ ಹನಿ ಸೂಚನೆ ನೀಡೈತೆ/

ಅಣ್ಣಯ್ಯಾ/ಮೋರೆಲಿ ನಗುವು ಜಿನುಗೈತೆ//

 

ಹೊತ್ತ ಭೂಮಿಯ ಮುದ್ದಿನ ಕೂಸುಗಳು/

ಹೊಟ್ಟೆಗೆ ಅನ್ನ ನೀಡೋ ರೈತರು/

ಅಣ್ಣಯ್ಯಾ/ಗದ್ದೆ ಬದುವಲ್ಲಿ ಮರಗಿಡ ನೆಟ್ಟಾರು//

 

-ರತ್ನಾ ಕೆ.ಭಟ್, ತಲಂಜೇರಿ

 

ಚಿತ್ರ್