ನ್ಯಾನೋ ಕಥೆ - *ತಬ್ಬಲಿಯಲ್ಲ*

ಜನಸಂದಣಿ ಸೇರಿದ್ದು ನೋಡಿ ರಾಜಣ್ಣ ಬಂದ. ಕಂಡ ದೃಶ್ಯ ಕರುಳು ಹಿಂಡುವಂತಿತ್ತು. ಬಟ್ಟೆಯಲ್ಲಿ ಸುತ್ತಿದ್ದ ಮಗುವೊಂದು ಜೋರಾಗಿ ಅಳುತಿತ್ತು. ಜನರ ಬಾಯಿಗೆ ಬೀಗ ಹಾಕಲು ಸಾಧ್ಯವೇ? ಮಕ್ಕಳಿಲ್ಲದ ರಾಜಣ್ಣ ನಿರ್ಧಾರ ಮಾಡಿ ಅನಾಥ ಮಗುವನ್ನು *ನೀನು ತಬ್ಬಲಿಯಲ್ಲ ಕಂದಾ* ಎಂದು ಎದೆಗವಚಿಕೊಂಡ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ