ಪವಿತ್ರ ರಕ್ಷಾಬಂಧನ

ಪವಿತ್ರ ರಕ್ಷಾಬಂಧನ

ಕವನ

ಶ್ರಾವಣ ಮಾಸದ ಹುಣ್ಣಿಮೆ ದಿನದಂದು

ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು|

ರಕ್ಷಣೆ ಸಹಕಾರ ನಂಬಿಕೆಯೊಂದು

ಶುಭ ಹಾರೈಕೆಗಳ ರಕ್ಷಾಬಂಧನವಂದು||

 

ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ

ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು|

ವಿಶೇಷತೆಯ ದಾರವನು ಒಲಿದು ನೀಡಿದನು

ಇನಿಯನ ಕೈಯ ಮಣಿಕಟ್ಟಿಗೆ ಬಂಧಿಸೆಂದನು||

 

ಪಂಚ ಪಾಂಡವರ ಮನದನ್ನೆ ದ್ರೌಪದಿ

ಮಹಾ ಮಹಿಮ ಗೋಕುಲ ವಾಸನ ಸ್ಮರಿಸುತ|

ಸೋದರನಾಗಿ ಸ್ವೀಕರಿಸಿ ಬಿಗಿದಳು ದಾರ

ಹರಸಿದನು ದಯಾಸಿಂಧು ಪಾಂಚಾಲಿಯ||

 

ಸೋದರತ್ವದ ಶೃಂಖಲೆ ಅಭಯ ಆಶ್ವಾಸನೆ

ಸೋದರಿಯ ಭರವಸೆ  ಪ್ರೀತಿಗಳ ಬೆಸುಗೆಯು|

ಸಂಬಂಧಗಳ ಓಘ ಮೇಘಮಾಲೆಯ ಬಂಧ

ಅಡಗಿದೆ ರಕ್ಷಾಬಂಧನದ ಪವಿತ್ರ ಸಂಬಂಧವು||

 

ಉಡುಗೊರೆ ಹಾರೈಕೆ ಆಶೀರ್ವಾದ

ರಾಖಿಯಲಿ ಬೆಸೆದಿದೆ ರಕ್ಷಾ ಕವಚವು|

ಧಾರ್ಮಿಕವಾಗಿ  ಹೆಣೆದ ಸುರುಳಿಗಳು

ಬೇರ್ಪಡಿಸಲಾಗದ ಅನುಬಂಧಗಳ  ಕಡಲು||

 

-ರತ್ನಾಕೆ.ಭಟ್, ತಲಂಜೇರಿ 

 

ಚಿತ್ರ್