ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?

ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?

Comments

ಬರಹ

ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ ಶಾಸಕರು ಹಾಗೂ ಮಂತ್ರಿ ಮಹೋದಯರು ತಮ್ಮ ನಿಷ್ಠೆಯು ಸಂವಿಧಾನದ ಕಡೆಗೆ ಇಲ್ಲ ಎಂದು ರಾಜಾರೋಷವಾಗಿ ಘೋಷಣೆ ಮಾಡುತ್ತಿರುವುದನ್ನು ಕಳೆದ ಕೆಲ್ಲವು ಕಾಲದಿಂದ ನೋಡುತ್ತಿದ್ದೇವೆ.

 ಈ ರೀತಿ ಪ್ರಮಾಣ ವಚನ ಸ್ವೀಕರಿಸುವುದು ಸಂವಿಧಾನಾತ್ಮಕವಾಗಿ ಸಿಂಧು ಎನಿಸಿಕೊಳ್ಳುತ್ತದೆಯೇ?

 ಈ ಸಾರೆ ಪ್ರಜಾಣವಚನ ಕಾರ್ಯಕೃಮವನ್ನು ದೂರದರ್ಶನದಲ್ಲಿ ನೋಡುವಾಗ ರಾಜ್ಯಪಾಲರು ಒಬ್ಬರಿಗೂ ಪ್ರಮಾಣವಚನವನ್ನು ಬೋಧಿಸಿದ್ದು ಕಂಡು ಬರಲಿಲ್ಲ. ಉಕ್ತ ಲೇಖನವು (dictation ) ಸರಿ ಇದೆಯೇ ಎಂದು ತಾಳೆ ನೋಡುವ ನಿರ್ಲಿಪ್ತ ಶಾಲೆ ಮೇಸ್ಟ್ರ ತರಹ ರಾಜ್ಯಪಾಲರು,ಮಂತ್ರಿಗಳಾಗುತ್ತಿರುವವರು ಓದುವುದನ್ನು ಕೇಳಿಸಿಕೊಳ್ಳುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಪ್ರಮಾಣವಚನವನ್ನು ಬೋಧಿಸಬೇಕು! ಓದಿಸುವುದಲ್ಲ.!! ಪ್ರಾಜ್ಞರು ಏನು ಹೇಳುತ್ತಾರೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet