ಪ್ರಾಣಿಗಳ ಬೆಂಗಳೂರು ಚಲೋ-2

ಪ್ರಾಣಿಗಳ ಬೆಂಗಳೂರು ಚಲೋ-2

ಆಫೀಸೋಲ್ಗೆ ಲೇಟ್  ಆಗೇ ಎಂಟರ್  ಆಗಿದ್ದಕ್ಕೆ 'ಬಾಸ್ಗೆ' ಏನಪ್ಪಾ ಹೇಳೋದು? 'ಇದ್ನಾ' ,ಹೇಳಿದ್ರೆ ಯಾರಾರ ನಂಬ್ತಾರ? ಡವಗುಟ್ಟೋ  ಗುಂಡಿಗೆನ ಎಡಗೈಯಲ್ಲಿ ಹಿಡಿದು ಬಾಸ್ ಕ್ಯಾಬಿನ್ಗೆ ಹೋಗೋಣ ಅಂದ್ರೆ, ಏನಾಶ್ಚರ್ಯ!! ಇಡೀ ಆಫೀಸಿನ  'ಸಕಲ ಸ್ಟಾಫೂ' ಸೇರಿ ಆಫೀಸಿನ ಮಧ್ಯದ ಖಾಲಿ ಜಾಗದಲ್ಲಿ  'ಗಹನ' ಚರ್ಚೆ ನಡೆಸುತ್ತಿದ್ದು ಅವರ್ಯಾರ್ಗೂ , ನಾ ಬಂದ ಪರಿವೆಯೂ ಇದ್ದಂತಿಲ್ಲ..

ಅದೆನಂತ 'ತಲೆ' ಹೋಗೋ ವಿಚಾರಾನ ಅವ್ರು ಡಿಸ್ಕಸ್ಸ್ ಮಾಡ್ತಿರಬಹುದು?

'ಅಪ್ಪಿ-ತಪ್ಪಿ'  ಕೇಂದ್ರ ಸರ್ಕಾರದವರು 'ಮುಂಬರೋ ಎಲೆಕ್ಚಂಗೊಸ್ಕರ'  ತುಟ್ಟಿ ಭತ್ಯೆ  ಜಾಸ್ತಿ ಮಾಡಿರಬಹುದ!! 'ಪತ್ನಿ' ನೆನ್ನೆ ಅಸ್ಟೇ ನೆನಪಿಸಿದ್ದಳು 'ನೂರೊಂದನೆ ಸಾರಿ', ಈ ಸಾರಿ ಅವಳ್ಗೆ ಹೊಸ ಆಭರಣ ಬೇಕೇ ಬೇಕು. ಮನ ಹಿಗ್ಗಿ ಹೀರೆಕಾಯಾಯ್ತು.

ಗಹನ ಚರ್ಚೆ ನಡೆಸಿದ್ದ ನಮ್  ಸ್ಟಾಫ್ ಹತ್ತಿರ ಹೋದ ಕೂಡ್ಲೇ ಅವ್ರು ನನ್ನೊಮ್ಮೆ ನೋಡಿ ಹೇಳಿದ್ರು, ಎರೀ ಕೇಳಿದ್ರ? ಕಂಡ್ರಾ ವೈಚಿತ್ರ್ಯ?  ಬೆಳಗೆ ಆಫಿಸ್ಗೆ ಬರ್ಬೇಕಾದ್ರೆ ದಾರೀಲೆಲ್ಲ ಬರೀ 'ಪ್ರಾಣಿಗಳೇ-ಪ್ರಾಣಿಗಳು'      ಕತ್ತೆ-ಕುದುರೆ-ನಾಯಿ-ನರಿ-ತೋಳ-ಆನೆ- ಒಟ್ನಲ್ಲಿ ಸಮಸ್ತ ಪ್ರಾಣಿ-ಕೀಟ ಲೋಕವೇ ಎಲ್ಲೆಲ್ಲು..

 

ಅಲ್ಲ ಎಂಥ ಕಾಲ ಬಂತು ನೋಡಿ ನಮ್ ಚಾಕರಿ ಮಾಡ್ಕಂಡು, ಹಾಕಿದಸ್ತು ತಿನ್ಡ್ಕಂಡು ಅದೆಂಗೋ ಇದ್ದ ಈ ಪ್ರಾಣಿಗಳು ನಮಗೆ ತಿರ್ಗಿ ಬೀಳೋದ್ ಅಂದ್ರೇನು? ಒಬ್ಬನ ಪ್ರಶ್ನೆ.
 
ಈ ಗಹನ ಚರ್ಚೆಲಿ ನಮ್ 'ಬಾಸೂ' ಪಾಲುದಾರರಾಗಿ, ನಮ್ಮನೆ 'ಡಾಲಿ' ಅದ್ಯಾವ್ತ್ತು  ನಾ ಹೇಳ್ದಂಗೆ ಕೇಳ್ಕೊಂಡ್ ನಂಜೊತೆ ಅದೆಸ್ಟ್ ಚೆನ್ನಾಗಿತ್, ಈಗ ನಂಗೆ 'ಗುರ್ರ್' ಅನ್ನುತ್ತೆ! 'ಆ ಪ್ರಾಣಿಗಳು' ಅದ್ಯಾವಾಗ ನಮ್ 'ಡಾಲೀಗ್' ಅದೇನ್ ಮೋಡಿ ಮಾಡಿದ್ವೋ ನಾ ಕಾಣೆ..
 
ಸರಿ ಈಗ ಹೊರಗಡೆ ಏನ್ ನಡೀತಿದೆ ಅಂತ ತಿಳಿಬೆಕಲ್ಲ , ಅದ್ಕೆ ಬಾಸು ತಮ್ ಕ್ಯಾಬಿನ್ನಲ್ಲಿದ ಟೀ ವೀ ನಾ ಹಾಲಿಗೆ ತರಿಸಿ ಅಲ್ಲಿ ,ಎಲ್ಲರ್ಗೂ ಕಾಣಿಸುವಂತೆ  ಅದ್ನಿರಿಸಿ  ಈಗೀಗ 'ವಿಷಯವಲ್ಲದ ವಿಷಯಕ್ಕೆ ಮಹತ್ವ ಕೊಟ್ಟು' ತಿರ್-ತಿರ್ಗಾ ಪ್ರಸಾರ ಮಾಡಿ ಫೇಮಸ್ ಆಗಿದ್ದ ಟೀ ವೀ ೯ ಹಾಕಿದರು,
 
ವೀಕ್ಷಕರೆ -ನಮಸ್ಕಾರ ನಾ 'ಸ್ಪೀಡ್ ಸೀನು' ಕ್ಯಾಮ್ಮೆರಮ್ಯಾನು 'ಸೂಪರ್ ಸ್ಯಾಮ್' ಜೊತೆ , ನೋಡಿ ವೀಕ್ಚಕರೆ  ನಿಮಗೆಲ್ಲ ಗೊತ್ತಿರೋ ಹಾಗೆ 'ಕಾಡು-ನಾಡು' ಪ್ರಾಣಿಗಳೆಲ್ಲ ,ತಮಗೆ ಮನುಷ್ಯರಿಂದ ಸಮಸ್ಯೆಯಾಗಿದೆ, ತಮ್ಮನ್ನ ದುರ್ಬಳಕೆ -ದುರುಪಯೋಗ ಪಡಿಸ್ಕೊಳ್ತಿದಾರೆ ಅಂತ  ಕಾಡಿಂದ ನಾಡಿಗೆ ಹೆಜ್ಜೆಯಿಟ್ಟು ನಮ್  ನಾಡಲ್ಲಿ  ನಮ್  ಜೊತೆ ಇದ್ದ  'ಸಾಕು ಪ್ರಾಣಿಗಳನ್ನ  ತಮ್  ಜೊತೆ  ಸೇರೋಸ್ಕೊಂದು ವಿಧಾನ ಸೌಧಕ್ಕೆ 'ಬೃಹತ್ ಜಾಥ' ಮಾಡೋಕ್ ರೆಡಿ ಆಗಿದವೇ.
ಈಗ ನಾವ್  ಆ ಪ್ರಾಣಿಗಳಲ್  ಮುಖ್ಯವದವ್ರನ್ನ ಕೆಲವರನ್ನ ಮಾತಾಡಿಸ್ತೀವಿ. 
 
 
 ವರದಿಗಾರ- ನಮಸ್ಕಾರ,
 
ಕಾಡಲ್ಲಿ ಎಲ್ಲ  ಕ್ಷೇಮವೇ?
 
ಅದೇನು ಇದ್ದಕ್ಕಿದ್ದಂತೆ ನಾಡಿಗೆ ಬಂದು- ಬಳಗ -ಸಮಸ್ತ ಪ್ರಾಣಿಗಳ ಜೊತೆ ಎಂಟ್ರಿ ಕೊಟ್ಟಿದೀರ ?
ನಿಮ್ಮ ಸಮಸ್ಯೆ ಏನು?
ಬೇಡಿಕೆಗಳೇನು?
ಸರಿ ಮಾಡೋಕ್ಕೆ ಕಾಲ ಮಿತಿ ಎಷ್ಟು?
ಸಮಸ್ಯೆ ನಿವಾರಿಸದಿದ್ದರೆ ಮುಂದಿನ ನಿಮ್ಮ ನಡೆ ಏನು?
ನಿಮಗೆ ಇದ್ದಕ್ಕಿದಂತೆ ಈ ತರಹ ಚಳುವಳಿ-ಜಾಥ ಮಾಡೋ ಐಡಿಯಾ  ಹೇಗ್ ಬಂತು:?
ನಿಮ್ಮ ಹಿಂದೆ ಇನ್ನು ಯಾರು ಇದ್ದಾರೆ?  
 
ಉತ್ತರಿಸಲ್ಲೋ ಬಿಡದಂತೆ 'ಪುಂಖಾನು-ಪುನ್ಖವಾಗ್' ಪ್ರಶ್ನಿಸುತ್ತಿದ್ದ  ಆ ವರದಿಗಾರನ ಬಾಯಿ ಮುಚ್ಚಿಸಲು  ಕೊನೆಗೆ 'ಜೇಡ' ಅವನ ತುಟಿಗೆ  'ಸೀಲ್' ಹಾಕಿತು!!
 
ಮುಂಚೂಣಿಯಲ್ಲಿದ್ದ ಆನೆ ಹೇಳಿತು 'ಅಲ್ಲ ಈ ಮನುಷ್ಯರ್ಣ ಮಾತದ್ಸೋದೆ ತಪ್ಪು' ಒಂದ ಎರದ? ಒಮ್ಮೆಗೆ ಹತ್ತಿಪ್ಪತ್ತು ಪ್ರಶ್ನೆನ ಉಸಿರೂ ಬಿಡದಂಗೆ ಕೇಳಿದ್ರೆ ,ಜೇಡ ,ಅವನ ಬಾಯಿಗ್ 'ಸೀಲ್' ಹಾಕಿ ಒಳ್ಳೆ ಕೆಲಸ ಮಾಡಿದೆ. ಯ್ಯೋ  ವರದಿಗಾರ ನಮ್ ಬೇಡಿಕೆ-ಸಮಸ್ಯೆ-ನಿವಾರಣೆ ಎಲ್ಲವನೂ ವಿಧಾನ ಸೌಧಕೊಗ್ ಅಲ್ಲಿ ಅದ್ನ ನಿವರ್ಸೋಕಿರೋರತ್ರನೆ ಹೇಳ್ತಿವ್  ನೀ ತೆಪ್ಪಗ್ ದಾರಿ ಬಿಟ್  ಇಲ್ಲಿಂದ ಜಾಗ ಖಾಲಿ ಮಾಡು. ಆದ್ರೆ ಒಂದು ಮಾತು  ನಾವ್ ಯಾರಗೂ ಕೇಡು ಮಾಡಲ್ಲ, 
 
ನಮ್ಮ ಆ ಟೀ ವೀ ವರದಿಗಾರ ಬಾಯಿಗ್ ಸೀಲ್ ಹಾಕಿಸ್ಕೊಂಡು ಏನೂ ಮಾತಾಡೋಕು ಆಗದೆ ಕ್ಯಾಮರೆ ಮ್ಯಾನೆ ,ಕ್ಯಾಮೆರಾನ ರೋಡಿಗಿತ್ತು ರಸ್ತೆ ಮೇಲ ಮಲ್ಕೊಂಡು ವರದಿಗಾರ ಕಂ ಕ್ಯಾಮೆರಾಮ್ಯಾನು ಆಗ್ ಹೇಳಿದ
ವೀಕ್ಚಕರೆ ನೀವೇ ನೋಡಿದರಲ, ನಡೆದ್ದನ್ನ! ನಾ ಹೆಚ್ಚಿಗೇನು ಹೇಳಲ್ಲ, ಕಾಡು ಪ್ರಾಣಿಗಳೆಲ್ಲ ವಿಧಾನ ಸೌಧಕ್ಕೆ  ಹೋಗ ಅಲ್ಲಿರೋರತ್ರಾನೆ  ಅದೇನೋ ಕೊಡೊ-ತಗೊಳೋ ಮಾತಾಡ್ತಾವಂತೆ.,
 
ಅದ್ಕೆ ನೀವೆಲ್ಲ ಈಗ ನಾವ್  ಪ್ರಸಾರ ಮಾಡೋ  ನಮ್  'ಹಳೆ ಸ್ಟಾಕ್ನಲ್ಲಿರೋ    ಈ ಪ್ರಾಣಿಗಳ ಕುರಿತ ಚಿತ್ರಗಳನ ನೋಡ್ ಖುಸಿ ಪಡಿ. ನಮ್ ನಿಮ್ ಭೇಟಿ ವಿಧಾನ ಸೌಧಕ್ಕೋದ್ ಮೇಲೆ.  ಕ್ಯಾಮೆರಾಮ್ಯಾನು ಕಂ ವರದಿಗಾರ   ಸೂಪರ್ ಸ್ಯಾಮು.ಟೀ ವೀ ೯  ಧಿಟ್ಟ-ನೇರ-ನಿರಂತರ..  
 
ಮುಂದಿನ ಭಾಗದಲ್ಲಿ 'ವಿಧಾನ ಸೌಧದಲ್ಲಿ' ಪ್ರಾಣಿಗಳು...
ನಿರೀಕ್ಷಿಸಿ...