ಬವಣೆ ....ಜಲ ಚಿನ್ನ್ಹೆಯಾಗದಿರಲಿ!

ಬವಣೆ ....ಜಲ ಚಿನ್ನ್ಹೆಯಾಗದಿರಲಿ!

ಕವನ

ಕತ್ತಲ ಗುಹೆಯೊಳಗೆ

ಕಲ್ಲು ಹೊಡೆದಂತೆ

ಬರುವ ಕಷ್ಟಕೋಟಲೆ ದಂಡು

ಕಾಣುತಿದೆ ನೀರ್ಗಲ್ಲ ತುದಿಯಂತೆ

 

ಬೆದರಿಹುದು ಮನವು

ಎಲ್ಲಿ ಉಳಿವುದೋ ಬರಡು ಬವಣೆ

ಬಾಳ ಹಾದಿಯ ಪಯಣದಲಿ

ನಿರಂತರ ಜಲ ಚಿಹ್ನೆಯಾಗಿ

 

ಬಾನಿಂದ ಜಾರಿ ಬಂದ

ಹಿಮ ಅಗುಳಿನಂತೆ

ಕರಗಿ ಹೋಗಲಿ ದುಃಖ ದುಮ್ಮಾನ

ಹರಸು ಅನುದಿನ ದೇವ ಗುರುವೇ

ದೇವ ಗುರುವೇ, ಹರಸು ದೇವ ಗುರುವೇ!

 

ಶ್ರೀ ನಾಗರಾಜ್.