ಬಸಳೆ ಚಿಗುರು ತಂಬುಳಿ

ಬಸಳೆ ಚಿಗುರು ತಂಬುಳಿ

ಬೇಕಿರುವ ಸಾಮಗ್ರಿ

ಒಂದು ಹಿಡಿ ಬಸಳೆ ಚಿಗುರು, ಜೀರಿಗೆ ೧ ಚಮಚ, ಸಣ್ಣ ತುಂಡು ಬೆಲ್ಲ, ಮಜ್ಜಿಗೆ ೩ ಸೌಟು( ಹುಳಿ ಇದ್ದರೆ ಕಡಿಮೆ ಸಾಕು) ಉಪ್ಪು ರುಚಿಗೆ, ಚೂರು ಬೆಣ್ಣೆ.ಹಸಿ ತೆಂಗಿನತುರಿ ೧ ಕಪ್. ಒಗ್ಗರಣೆ ಗೆ ಮೆಣಸು, ಸಾಸಿವೆ, ಬೆಣ್ಣೆ ಚೂರು.

ತಯಾರಿಸುವ ವಿಧಾನ

ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ ತಯಾರು.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ