ಬಾಳೆಹಣ್ಣಿನ ದೋಸೆ
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%AC%E0%B2%BE%E0%B2%B3%E0%B3%86%E0%B2%B9%E0%B2%A3%E0%B3%8D%E0%B2%A3%E0%B3%81.jpeg?itok=776D_HgS)
ಬೇಕಿರುವ ಸಾಮಗ್ರಿ
ಬಾಳೆಹಣ್ಣು - ೬, ಗೋಧಿ ಹಿಟ್ಟು ೧ ಕಪ್, ಬೆಲ್ಲ -ಸ್ವಲ್ಪ, ತುಪ್ಪ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿ. ಬಾಳೆ ಹಣ್ಣಿನ ಪೇಸ್ಟ್ ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ನೀರನ್ನು ಹಾಕುತ್ತಾ ಕಲಸಿ. ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಕಾವಲಿಗೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧ.