ಬಾಳೆಹಣ್ಣಿನ ಬನ್ಸ್
ಬೇಕಿರುವ ಸಾಮಗ್ರಿ
ಬಾಳೆಹಣ್ಣಿನ ತಿರುಳು ೧ ಕಪ್, ಮೈದಾಹಿಟ್ಟು ೨ ಕಪ್, ಸಕ್ಕರೆ ಸ್ವಲ್ಪ, ಎಣ್ಣೆ ಕರಿಯಲು, ಸೋಡಾ ಚಿಟಿಕೆ, ಉಪ್ಪು ರುಚಿಗೆ.
ತಯಾರಿಸುವ ವಿಧಾನ
ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ. ಇದು ಕರಾವಳಿ ಜನರ ಅಚ್ಚುಮೆಚ್ಚಿನ ತಿಂಡಿ.
- ಸಹನಾ ಕಾಂತಬೈಲು, ಮಡಿಕೇರಿ