ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ
ನಲುಗುತ್ತಿದೆ ಜಗವು
ಆಸೆಗಳ ಬೆನ್ನುಹತ್ತಿ ಮರಗುತ್ತಿದೆ ಮನವು
ಯಾರೋ ಬರೆದಿಟ್ಟ ಅಕ್ಷರಗಳಿಗೆ
ಮತ್ಯಾರೋ ಮುನ್ನುಡಿ ಬರೆದು ಮುಗಿಸುತ್ತಾರೆ
ಆಂತರ್ಯದ ಅರ್ಥವನ್ನೇ ಅರಿಯದೆ
ಎಡವಿಬೀಳುತ್ತಾರೆ
ಪ್ರೀತಿಯೆಂಬುದು ಸೆಳೆತವೇ!
ಹಾಗಂತ ಎಲ್ಲಾ ಹಿತಾಸಕ್ತಿಗಳನ್ನು ಬಲಿಕೊಟ್ಟು
ತಿಳಿಸದೇ ಮುನ್ನಡೆವುದು ಸಮಸ್ಯಗಳನ್ನು
ಮೈಮೇಲೆ ಎಳೆದುಕೊಂಡಂತೆ
ಒಮ್ಮೆ ಕುಲದ ನೆರಳುಗಳು ಅಡ್ಡಗಟ್ಟಿದರೆ
ಅದರ ಹಿಂದೆಯೇ ಸಾವಿನ ಹೆಜ್ಜೆಗಳು
ಹಿಂಬಾಲಿಸುತ್ತವೆ
ಒಪ್ಪು ತಪ್ಪುಗಳ ಅರ್ಥವನ್ನು ತಿಳಿಯುವ ಮುನ್ನವೇ
ಯಾವುದೋ ಸಂಗರ್ಷಕ್ಕೋ ಸಮಾಪ್ತಿಗೋ
ದಾರಿಯಾಗುವುದು ಒಳಿತಲ್ಲ
ಪ್ರೀತಿಯೆಂಬುದು ಪಾವಿತ್ರ್ಯವೇ
ಅದನ್ನು ಪರಿಪೂರ್ಣವಾಗಿ ಅರ್ಥೈಕೊಳ್ಳಬೇಕು
ಸಾವು ನೋವಿನ ಮಧ್ಯದ
ಅಂತರವನ್ನು ಅರಿತುಕೊಳ್ಳಬೇಕು
ಬಯಕೆಗಳ ಬಳ್ಳಿಯಲ್ಲಿ ಅರಳಿದ ಹೂಗಳು
ಎಂದೂ ಬಾಡದ ಹಾಗೇ ಎಚ್ಚರವಹಿಸಬೇಕು
ಭಯದ ಬವಣೆಯಲ್ಲಿ ಸಿಕ್ಕಿ ತತ್ತರಿಸುದ್ಯಾಕೆ
ಪರಿಸ್ಥಿತಿಯ ಅಗಾಧತೆಯನ್ನೊಮ್ಮೆ
ಅವಲೋಕಿಸಬಹುದಲ್ಲವೆ?
ಎಲ್ಲ ಗೆರೆಗಳೂ ನೇರವಾದವುಗಳಲ್ಲ
ಎಲ್ಲ ಅಕ್ಷರಳು ಕವನವಾಗುವುದಿಲ್ಲ
ಅರಿವಿನಾ ಕಿಡಿಗೆ ಬೆಂಕಿಯನ್ನಚ್ಚುವ ಮುನ್ನ
ಅದರ ಕಿಡಿ ಎಲ್ಲವನ್ನೂ ಧಹಿಸದ ಹಾಗೇ
ತನಗೂ ಆಪತ್ತು ಸಂಭವಿಸದಂತೆ
ಬಾಳಿನ ಹೆಜ್ಜೆಗಳನ್ನು ಮುಂದಿಡಬೇಕಲ್ಲವೇ ?..
ಚಿತ್ರಕೃಪೆ:- ಅಂತರಜಾಲ
ಈ ಕವನದ ನನ್ನ ಬ್ಲಾಗ್ ಮಿಂಚೆ :- http://vasanthrr.blogspot.in/2012/03/blog-post_31.html
Comments
ಉ: ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ
In reply to ಉ: ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ by jaikissan
ಉ: ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ
In reply to ಉ: ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ by vasanth
ಉ: ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ