ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು

ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು

Comments

ಬರಹ

ಬೆಂಗಳೂರಿನ ವಾಕ್ಪಟುಗಳ  ಸಂಘಕ್ಕೆ ಸ್ವಂತ ಹೆಸರು ಇಡೋಣ ಎಂಬ ಆಶಯದ ಮೇರೆಗೆ ಈ ವಿನಂತಿ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದವಾಕ್’ಇಂದ ಶುರುವಾಗುವ ಬೇರೊಂದು ಹೆಸರನ್ನು ಇಡೋಣ. ಹೆಸರು ಒಂದು ನಾಮಪದವಾಗಿರಬೇಕು.  ‘-ಗಳು’ ಅಥವಾ ‘-ರು’ ಸೇರಿಸಿಕೊಂಡು ಕನ್ನಡಪದವಾಗಿಸಿಕೊಳ್ಳಬಹುದು. 


ಬೇ ಏರಿಯಾದ ನಮ್ಮ ವಾಕ್ಪಟುಗಳ ಬಾಂಧವರು ಸಲ್ಲಿಸಿರುವ ಹೆಸರುಗಳು ಹೀಗಿವೆ...  ಅಶೋಕ್ ಹಂದಿಗೋಳ್: ವಾಗ್ಮಿ, ವಾಕ್-ನಿಪುಣ (=ವಾಗ್ನಿಪುಣ?), ವಾಕ್ಪ್ರವೀಣ.  ಅನಿಲ್ ಜೋಶಿ:  ವಾಕ್-ಕಲಿ (ಅಥವಾ ವಾಗ್ಗಲಿ, ‘ಗಂಡುಗಲಿ’ಯಲ್ಲಿರುವ ಕಲಿಯಂತೆ), ವಾಕ್-ಪುಲಿ.  ಲೋಕೇಶ್ ಎಮ್. ವಿ. : ವಾಕ್ಪ್ರವೀಣರು, ವಾಗ್ನಿಪುಣರು, ವಾಗ್ಮೇಧಾವಿ, ವಾಗ್ದಿಗ್ಗಜರು, ವಾಗ್ಭೂಶಣ, ವಗ್ರತ್ನಗಳು, ವಾಕ್ಪ್ರಧಾನರು, ವಾಗ್ಸಿರಿ.  ಸತೀಶ್ ಪಾಠಕ್ : ವಾಕ್ಪ್ರವೀಣರು, ವಕ್ಪುಲಿಗಲು.  ಧನಂಜಯ ಕೆಂಗಯ್ಯ : ಭಾಷಣಕಾರರು, ವಾಕ್ಚಾತುರ್ಯ


ಈ ಮೇಲಿನವುಗಳಲ್ಲಿ ಕೆಲವು ನಾಮಪದಗಳಲ್ಲ. ಇನ್ನು ಕೆಲವಲ್ಲಿ ಸಂಸ್ಕೃತದ ಕನ್ನಡದ ಜೋಡಣೆ ಅಷ್ಟು ಸರಿ ಎನಿಸುವುದಿಲ್ಲ. ಕೆಲವು ವ್ಯಾಕರಣಕ್ಕೆ ಬದ್ಧವಾಗಿಲ್ಲದೆಯೂ ಇರಬಹುದು. ಒಟ್ಟಿನಲ್ಲಿ ಹೆಸರಿಸಲು ನಡೆದಿರುವ ಪ್ರಯತ್ನದಲ್ಲಿ ಇಲ್ಲಿಯವರೆಗೆ ಇವು ಲಭ್ಯ. ಒಂದು ಬೇರೆ ತರಹದ ಹೆಸರೇ ಆಗಿರಬಹುದು (ಔಟ್ ಆಫ್ ದ ಬಾಕ್ಸ್)! ಆದರೆ ‘ಹೆಸರಿನಲ್ಲೇನಿದೆ’ ಎನ್ನವ ಕಡೆಗೆ ಎಡುವುವುದು ಬೇಡ ;-)


ಒಂದು ಸೂಕ್ತ ಹೆಸರನ್ನು ಸೂಚಿಸಲು ಬುಧವಾರ, ೧೬ರ ದಿನಾಂತ್ಯದವರೆಗೆ (ಭಾರತೀಯ ಕಾಲಮಾನದ ಪ್ರಕಾರ) ಅವಕಾಶವಿದೆ.


ಪ್ರಭು


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet