ಬೇಡದ ಅತಿಥಿ ಸ್ಯಾಂಡಿ !
ಸ್ಯಾಂಡಿ ಬಂದಳು, ನಿಂತು ತಿರುಗಿದಳು, ಚೆಲ್ಲಿ ಸುರಿದು ಹೋದಳು
ಬೇಡದ ಅತಿಥಿಯಾಗೇ ಬಂದು, ಹರಡಿಹಳು ಊರಲ್ಲೆಲ್ಲ ಇರುಳು
ಅವಳ ಒಡಲಲ್ಲಿ ಇನ್ನೆಷ್ಟು ತುಂಬಿತ್ತೋ ಆಕ್ರೋಶ?
ಪುಣ್ಯಕ್ಕೆ ಹೊದ್ದಲಷ್ಟೇ category ಎರಡರ ರೋಷ
ಬಂದು ಓಡಾಡಿ, ನುಗ್ಗಿ ಚೆಲ್ಲಾಡಿ, ಕಿತ್ತಾಡಿ ಹೋದಳವಳು ಹೆಮ್ಮಾರಿ
ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ ಎಂದಂತೆ ಶರಪಂಜರದ ಕಾವೇರಿ
ಸ್ಯಾಂಡಿಯೂ ಕಾವೇರಿಯಂತೆ, ನಿಂತು ನೋಡುತ್ತ ಹರಿಸಿಹಳು ಕಣ್ಣೀರಧಾರೆ
ತಪ್ಪಿತಸ್ತೆ ನಾನಲ್ಲ, ಏಕೆ ದೂರುವಿರಿ? ನಾ ನಿಮಿತ್ತ ಮಾತ್ರ ಸೂತ್ರದಾರನೇ ಬೇರೆ
ನೀರಲ್ಲಿ ಮಿಂದ ಮನೆಗಳು, ಭೀತಿಯ ಮನಗಳು, ಹೊತ್ತೊಯ್ವ ತೆಪ್ಪಗಳು
ನೆನಪಿಗೆ ತಾರದೆ ಬಿಡಲಿಲ್ಲ ಗೊರೂರರ ಅಯ್ಯನ ಸಂಸಾರದ ಕಷ್ಟಕೋಟಲೆಗಳು
ಹೊಟ್ಟೆಗೆ ಹಿಟ್ಟಿಲ್ಲ, ಗಾಡಿಗೆ ಗ್ಯಾಸ್ ಇಲ್ಲ, ಗ್ಯಾಸಿನ ಬೆಲೆ ನಿತ್ಯ ಏರಿಹುದಲ್ಲ?
ಸಮಸ್ಯೆಗಳೂ ಪರಿಹಾರಗಳೂ ಸೇರದ ರೇಖೆಗಳಾಗಿಯೇ ಏರಿ ಎರಿ ಹೋದವಲ್ಲ?
ಎಲ್ಲೆಲ್ಲೂ ಮಳೆಯ ಧಾರೆ, ಭರದಿ ಬೀಸುವ ಗಾಳಿ, ನಿಂತ ನೀರಿನ ಆವರಣ
ಮಧ್ಯದಲೆಲ್ಲೋ ಹೊತ್ತುರಿದಿತ್ತು ಕೆಲವು ಮನೆಗಳು, ಅಗ್ನಿಗೂ ಇಲ್ಲ ಕರುಣ
ಸ್ಯಾಂಡಿಯ ಅಬ್ಬರದಿಂದ ಆಗಿಹುದಂತೆ ಐವತ್ತು ಬಿಲಿಯನ್ ನಷ್ಟ
ಚುನಾವಣೆಯ ಬಿಸಿಯನ್ನು ಥಣ್ಣಗಾಗಿಸಿದ್ದು ಅಭ್ಯರ್ಥಿಗಳಿಗೆ ಕಷ್ಟ
ನೀರ ಮಧ್ಯದಿ ನಿಂತ ಮನೆಗಳೋ, ಮನೆಗಳ ಸುತ್ತಲೂ ನಿಂತ ನೀರೋ?
ನೀರೆ ತುಂಬಿದಳು ಎಲ್ಲೆಲ್ಲೂ ನೀರು, ಉಪಯೋಗ ಮಾತ್ರ ಜೀರೋ !
ನಿಂತ ನೀರು, ಹೆಪ್ಪುಗಟ್ಟುವ ಛಳಿಗಳಿಂದ ಹಲವು ಕಾಯಿಲೆ ಹರಡಲಿದೆಯಂತೆ
ಗಾಯದ ಮೇಲೆ ಬರೆ ಎಳೆದಂತೆ, ಮತ್ತೊಂದು ಚಂಡಮಾರುತ ಬರಲಿದೆಯಂತೆ!
ಕತ್ತಲೆಯೇ ತುಂಬಿಹ ನಗರದಲ್ಲಿ ಬೆಳಕು ಹರಿಯಲಿ, ಆಗಲಿ ಇಂದೇ ದೀಪಾವಳಿ
ಮನುಜರ ತಪ್ಪನು ಮನ್ನಿಸು ತಾಯೇ, ದೂರವಿರಲಿ ನಮ್ಮಿಂದ ನೆರೆ ಹಾವಳಿ
Comments
ಉತ್ತಮ ಕವನ ಶ್ರೀನಾಥ್
In reply to ಉತ್ತಮ ಕವನ ಶ್ರೀನಾಥ್ by partha1059
ಆತ್ಮೀಯ ಶ್ರೀನಾಥ ಭಲ್ಲೆಯವರೇ,
In reply to ಆತ್ಮೀಯ ಶ್ರೀನಾಥ ಭಲ್ಲೆಯವರೇ, by Prakash Narasimhaiya
ಧನ್ಯವಾದಗಳು ಪ್ರಕಾಶ್ ...
In reply to ಧನ್ಯವಾದಗಳು ಪ್ರಕಾಶ್ ... by bhalle
ಆತ್ಮೀಯ ಭಲ್ಲೇಜಿ,
In reply to ಆತ್ಮೀಯ ಭಲ್ಲೇಜಿ, by Prakash Narasimhaiya
ನಿಜ ... ಏನು ಹೇಳಲಾಗುವುದಿಲ್ಲ :-
In reply to ಉತ್ತಮ ಕವನ ಶ್ರೀನಾಥ್ by partha1059
ಧನ್ಯವಾದಗಳು ಪಾರ್ಥರೇ ...
"ಶರಪಂಜರದ ಕಾವೇರಿ"
In reply to "ಶರಪಂಜರದ ಕಾವೇರಿ" by ಗಣೇಶ
ಧನ್ಯವಾದಗಳು ಗಣೇಶ್'ಜಿ