ಬ್ಲಾಗಿನ ಚೀಲ !

ಬ್ಲಾಗಿನ ಚೀಲ !

ಬ್ಲಾಗೆಂಬ ಜೋಳಿಗೆ ತುಂಬ
ಎಳ್ಳು ಜೊಳ್ಳು ಕಾಳೆಲ್ಲ ತುಂಬ
ತುಂಬುತುಂಬುತ ಹರಿದ ಧಾರೆ
ಹೂವ್ವಂತೆ ಅರಳಿದರೆ ಕೆಂದಾವರೆ ||

ಬಾಗಿಲು ತೆಗೆದಾ ಹಾಗೆಲ್ಲ
ಮನಕದ ತಟ್ಟಿ ಪದಗಳ ಪಲ್ಲ
ಪಲ್ಲವಿಸುತ ಪರಿಮಳಿಸುತಲೆಲ್ಲ
ಪಸರಿಸಿದಂತೆ ಗೊನೆ ಗೊನೆ ಸಾಲ ||

ಹುಳು ಹೊಡೆದು ಬಿಟ್ಟವೊ
ಮುಟ್ಟದೆಲೆ ಕನ್ನಿಕೆಯಾಗಿಟ್ಟವೊ
ಪೇರಿಸಿಟ್ಟ ಜಗದಿ ಹುಡುಕಿ ಜಾಗ
ತಾವುಳಲು ತಾವೆ ಹೊತ್ತಾವೆ ನೊಗ ||

ಚೀಲ ತುಂಬಿ ತುಳುಕುತಿದೆ
ಇಣುಕಿ ಹೆಕ್ಕಿ ಮುಕ್ಕುವರಿಲ್ಲದೆ
ಮೆದ್ದು ನೋಡಲೆ ತಾನೆ ಸೊಗಸು
ಅರಿವಾಗುವ ನಿಜಾಯತಿ ಹೊಂಗನಸು ||

ಇದ್ದರು ಕಾಗುಣಿತ ಕುಣಿತ
ಒಟ್ಟಾರೆ ಸುಸಂಗತದಾ ಗಣಿತ
ಅಂದುಕೊಂಡೆ ತುಂಬಿಸುತಿದೆ ಬಳ್ಳ
ಕದ್ದು ಕಾದಿದೆ ಫಲಿತಕೆ ಮನದೊಳ ಕಳ್ಳ ||

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Comments

Submitted by lpitnal Wed, 05/14/2014 - 09:37

ನಾಗೇಶ್ ಜಿ, ಬ್ಲಾಗಿನ ಚೀಲ, ತುಂಬ ಕಾವ್ಯಮಯವಾಗಿದೆ,. ಹೊಸ ಹೊಸ ಪದ ಪ್ರಯೋಗ ಇಷ್ಟವಾಯಿತು. ದಿನವೂ ಸಾಹಿತ್ಯ ಸೇವೆ ಒದಗಿಸುತ್ತಿರುವ ತಮಗೆ ಸಂಪದಿಗನಾಗಿ ನಿಜಕ್ಕೂ ಸಲಾಮ್

Submitted by nageshamysore Wed, 05/14/2014 - 20:49

In reply to by lpitnal

ಇಟ್ನಾಳರೆ ನಮಸ್ಕಾರ. ಅಂತರ್ಜಾಲದಿಂದಾಗಿ ಅಸಂಖ್ಯಾತ ಕನ್ನಡ ಬ್ಲಾಗುಗಳ ಜೋಳಿಗೆ ತುಂಬಿ ತುಳುಕುವ ಕಾಲವಿದು. ಅದರ ಕುರಿತು ಆಲೋಚಿಸುತ್ತಿದ್ದಾಗ ಬಂದ ಲಘು ಲಹರಿಗೆ ಪದರೂಪ ಕೊಟ್ಟಿದ್ದೆ ಅಷ್ಟೆ. ನಿಮ್ಮ ಮೆಚ್ಚಿಕೆಗೆ ಧನ್ಯವಾದಗಳು :-)

Submitted by kavinagaraj Thu, 05/15/2014 - 09:05

ತುಂಬುತಿಹುದು ಬ್ಲಾಗ ಜೋಳಿಗಿ
ಹಂಚಿರೆಲ್ಲರಿಗೆ ಸಿಹಿಯ ಹೋಳಿಗಿ!!

Submitted by nageshamysore Fri, 05/16/2014 - 19:54

In reply to by kavinagaraj

ಇನ್ನು ಹತ್ತಾರು ಜೋಳಿಗೆ ತುಂಬುವಷ್ಟಿದೆ ಕವಿಗಳೇ, ಸವಿದು ಆಸ್ವಾದಿಸುವ ಸಹೃದಯ ಓದುಗರಿದ್ದರೆ ಸರಿ, ಹೋಳಿಗೆ ಹಂಚುವುದೇನು ಕಷ್ಟವಲ್ಲ ಬಿಡಿ, ಖಂಡುಗ ಮಾಡಿ ಬಡಿಸಬಹುದು :-) ನಿಮ್ಮ 'ಸಿಹಿ' ಪ್ರತಿಕ್ರಿಯೆಗೆ ಧನ್ಯವಾದಗಳು !