ಭೀಮ ಬಾ...

ಭೀಮ ಬಾ...

ಕವನ

ಲೋಕೊದ್ದಾರಕ ಭೀಮ ಎದ್ದು ಬಾ

ಬತ್ತಿದ ಹಣತೆಯಲಿ

ಅಕ್ಷರದ ಎಣ್ಣೆ ಹಾಕಿ

ಅಸಮಾನತೆಯ ಹೊಡೆದು ಹಾಕಲು

ನೀನೇ ಬಾ

 

ಗುಂಪು ಜಾಣರ ಜೊತೆಗೆ ಹೋಗಿ

ಲೆಕ್ಕವಿಲ್ಲದ ಚಿಂತೆ ಮಾಡಿ

ಕಾಲ ಕಾಲಕೂ

ಬರೆದ ಹೊತ್ತಿಗೆ

ಕತ್ತಲೆಗೆ ಹೋಗಿದೆ ಎದ್ದು ಬಾ

 

ವರ್ಣ ಭೇದವು ಮರವಾಗಿದೆ

ದ್ವೇಷ ಮತ್ಸರ ಊರು ಸೇರಿದೆ

ಮನ ಮನಗಳಲ್ಲಿ ಅನ್ಯಾಯ ಸೇರಿ

ನಿಮ್ಮ ಶಕ್ತಿಗೆ ಕುಂದು ಬಂದಿದೆ ಎದ್ದು ಬಾ

 

ಒಂದೇ ಮನೆಯ ರಾಜಕಾರಣ

ನೂರು ವರ್ಷದ ಗಂಟು ಮೂಟೆ

ಮೇಟಿ ಹಿಡಿದವ 

ನಾಟಿ ಮಾಡಿದವರ

ಹೊಟ್ಟೆ ಪಾಡು ಅಷ್ಟಿಷ್ಟಲ್ಲ

ತುತ್ತು ನೀಡಲು ಎದ್ದು ಬಾ

 

ಗಾಂಧಿ ತಾತನ ಶಾಂತಿ ಇಲ್ಲ

ರಕ್ತ ಕ್ರಾಂತಿಗೆ ನೀನೇ ಬೇಕು

ಒಡೆದ ದೋಣಿಯಲಿ ಸಾಗುತಿಹರು

ಅರಿತು ಬಾಳಲು 

ಕಲೆತು ಬಾಳಲು ಕಲಿಸಬೇಕಿದೆ

ನೀನೇ ಮರಳಿ ಜನಿಸಿ. ಬಾ

-ಹನುಮಂತಪ್ಪ ವಿ.ಎಸ್.

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್