ಮತಾಂಧರು

ಮತಾಂಧರು

ಬರಹ

ಮತಾಂಧರು

ಜಾತಿ ಮತ ನಮಗಿಲ್ಲ
ಎಂಧ್ಹೇಳೊ ನಾಯಕರು
ಮತಗಳನ್ನು ಯಾಚಿಸಲು
ಮನೆಯಮುಂದೆ ನಿಂತಿಹರು./೧/.

ಐದು ವರ್ಷ ತಿಂದುತೇಗಿ,
ದೇಶವೆಲ್ಲ ಕಸವ ಹೊಡೆದು,
ಗಗನ ಸಖಿಯರಂತೆ ನಿಂತು
ಬಲವಂತದಿ ನಗುತಿಹರು./೨/.

ಮರಿಯಾದೆಯ ಮರೆತುಹೋಗಿ,
ಮಾನವನ್ನು ತೊರೆದುಹಾಕಿ,
ನಾಲ್ಕುಕೋಟಿ ಕನ್ನಡಿಗರ
ತಲೆಗಳನ್ನು ತಿನ್ನುತಿಹರು./೩/.

ಕುಡಿತಮಾರೊ ಕೇಡಿಗಳು,
ತಲೆಕಡುಕ ರೌಡಿಗಳು,
ಎಲ್ಲ ಸೇರಿ ದೇಶವನ್ನು
ಚೂರು ಚೂರು ಮಾಡುತಿಹರು./೪/.

ಓಟುಕೇಳೊ ದುಷ್ಟರನ್ನು
ಕಾಟ ಕೊಟ್ಟು ಓಡಿಸಿ,
ಮತವ ಕೇಳೊ ಮಂಗಗಳನು
ಮತ್ತೂ ಒಡೆದು ಓಡಿಸಿ./೫/.

ಕನ್ನಡಿಗರೆ ಎಚ್ಚರಾ,
ನಾಡನುಳಿಸೊ ನಾಯಕರ,
ಹುಡುಕಿ ಹುಡುಕಿ ಓಟು ಹಾಕಿ
ಮನಸ್ಸಿನಿಂದ ಮತಕೊಡಿ./೬/.

-:ಅಹೋರಾತ್ರ.