ಮತ್ತಷ್ಟು ಗಾದೆಗಳು

ಮತ್ತಷ್ಟು ಗಾದೆಗಳು

ಬರಹ

ಸಂಪದದಲ್ಲಿ ಪ್ರಕಟವಾಗಿದ್ದ ಗಾದೆಗಳೆಲ್ಲ ಚೆನ್ನಾಗಿದ್ದವು. ನನಗೆ ಗೊತ್ತಿರುವ,ಮಲೆನಾಡು ಪ್ರಾಂತದಲ್ಲಿ ಹೆಚ್ಚಾಗಿ ಕೇಳಿಬರುವ ಕೆಲವು ಗಾದೆಗಳು...

೧. ಅಂಕೆ ಇಲ್ಲದ ಕುದುರೆ ಅಗಳು ಹಾರಿತ್ತು.

೨. ಕರಕರೆ ದೇವರಿಗೆ ಮರದ ಜಾಗಟೆ.

೩. ಅಜ್ಜಿ ನೂತದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ.

೪. ಸಲುಗೆ ಕೊಟ್ಟ ನಾಯಿ ನೊಸಲು ನೆಕ್ಕಿತ್ತಂತೆ.

೫. ಚರಿಗೆ ಅವಲಕ್ಕಿ, ಮರಿಗೆ ಗೊಜ್ಜು.

೬. ಹೆಣ ಹೊರುವವರಿಗೆ ತಲೆ ಕಡೆ ಆದರೇನು, ಕಾಲು ಕಡೆ ಆದರೇನು.

೭. ಬಡೆತ್ತಿಗೆ ಯಾಕೆ ದರೆ ಮೇಲಿನ ಹುಲ್ಲು.

೮. ಶನಿ ಹಿಡಿದು ಸಂತೆಗೆ ಹೋದರೆ ನರಿ ಹಿಡಿದು ತಲೆ ಬೋಳಿಸಿತ್ತಂತೆ.

೯. ಅಸಲೆ ಮಳೆಗಿಂತ ಬಿಸಿಲೇ ವಾಸಿ.

೧೦. ಬರತ ಬರತ ರಾಯರ ಕುದುರೆ ಕತ್ತೆ ಆಗ್ತಾ ಇದೆ.

೧೧. ಹತ್ತರ ಕುಟ ಹನ್ನೊಂದು, ಪರಿಶೆ ಕುಟ ಗೋವಿಂದ.

೧೨. ಚೌಡಿ ಬಿಡಿಸಿದವರೆ ಹೆಣ ಹೊರಬೇಕು.

೧೩. ಕೋಣ ಕರು ಹಾಕ್ತು ಅಂದರೆ ಕೊಟ್ಟಿಗೆಯಲ್ಲಿ ಕಟ್ಟು ಅಂದರು.

೧೪. ಆರತಿ ತಗಂಡರೆ ಉಷ್ಣ, ತೀರ್ಥ ತಗಂಡರೆ ಶೀತ.

೧೫. ಬೇಲಿಗೆ ಓತಿಕ್ಯಾತದ ಸಾಕ್ಷಿ.

೧೬. ಅರಸನ ಅಂಕೆ ಇಲ್ಲ, ದೈಯ್ಯದ ಕಾಟ ಇಲ್ಲ.