ಮತ್ತೊಂದು ಸ್ವಾತಂತ್ರದ ದಿನ....

ಮತ್ತೊಂದು ಸ್ವಾತಂತ್ರದ ದಿನ....

ಪ್ರತಿ ಬಾರಿ ಸ್ವಾತಂತ್ರ ದಿನ ಹತ್ತಿರ ಬಂದಾಗ ನೆನಪಾಗುತ್ತದೆ - 'ಓಹ್ ನಾಳೆ ರಜೆ ಇಲ್ಲಾ..ಇದ್ದಿದ್ರೆ ಎಂಬೆಸ್ಸಿಗಾದ್ರೂ ಹೋಗಿ ಬರಬಹುದಿತ್ತು'....ಮೈಲ್, ಮೇಸೇಜ್ನಲ್ಲಿ ಗೊತ್ತಿರುವವರಿಗೆ 'ಹ್ಯಾಪಿ ಇಂಡಿಪೆಂಡೆಂಟ್ ಡೆ' ಕಳಿಸಿ, ಯಥಾ ಪ್ರಕಾರ ಮತ್ತೆ ಕೆಲಸದಲ್ಲಿ ಮುಳುಗೊ ಪ್ರವರ. ಹಾಗೆ ಒಂದಷ್ಟು ಜನ ಕಳಿಸಿರೊ ಮೇಲ್, ಚಿತ್ರ , ಶುಭಾಶಯಗಳ ಮಧ್ಯೆ ದಿನ ಕಳೆಯುತ್ತೆ. ಅದು ಬಿಟ್ಟರೆ 'ಸ್ವಾತಂತ್ರ ದಿನದ ವಾತಾವರಣ' ಅನ್ನೋದೇನು ಕಾಣದ ಜಾಗದಲ್ಲಿ ಆಗೀಗ ಹೀಗೊಂದು ಕವನ ಬರೆದರೆ ಅದೆ ಹೆಚ್ಚು. ಈ ಬಾರಿಯೂ ಆ ರೀತಿಯಲಿ ಹುಟ್ಟಿದ ಕವನ ಇದು - 'ಎಲ್ಲರಿಗೂ ನಾಳಿನ  ಸ್ವಾತಂತ್ರ ದಿನದ ಶುಭಾಶಯಗಳೊಂದಿಗೆ' - ನಾಗೇಶ ಮೈಸೂರು

   
ಮತ್ತೊಂದು ಸ್ವಾತಂತ್ರದ ದಿನ....
_____________________  
ಸ್ವಾತಂತ್ರ ಬಂದ ದಿನ 
ಈ ಹೊತ್ತಿನಲೂ ಜನ
ನೆನಿತಾರ ಆ ಮಂದಿನ 
ರಜೆ ಸಿಕ್ಕಿದ ಮಂದೇನ? 

ಏಳುತ್ತಾರ ಜನ ಬೆಳಗು
ಜನಗಣಮನ ಒಳಗ್ಹೊರಗು
ಹಾಡ್ತಾರಾ ಒಂದೊಂದ್ಸಲಾ
ಅಡ್ಡಾಡುತ್ತಾರ ಹೋತಲಾ?

ಬೀದಿ ಮೂಲೆ ಕಂಬ ನೆಟ್ಟು
ಗಾಂಧಿದೊಂದು ಚಿತ್ರ ಇಟ್ಟು
ಸ್ವೀಟು ಚಾಕ್ಲೇಟು ಹಂಚ್ತಾರ
ಬೆಳಗಿನ ನಿದ್ದೆ ಹೊಂಚ್ತಾರ?

ಡಿಡಿನಲ್ಲೊ ಚಂದನದಲ್ಲೊ
ಬೋರಾದ್ರೂನು ದೇಶದ್ದಲ್ಲೊ
ಕೂತ್ಕೊಂಡು ಗಾಂಧಿ ನೋಡ್ತಾರ
ಮ್ಯಾಟಿನಿ ಶೋಗೆ ಓಡ್ತಾರಾ?

ರಜೆ ಗುರುವಾರ ಬರಿ ಶುಕ್ರವಾರ
ಲೀವ್ ಹಾಕಿ ಮಾಡಿದ್ರು ಟೂರ
ಕಾರು ಟೆಂಪೊ ಬಾನೆಟ್ಲಾದ್ರು
ಹಾರಾಡುತ್ತ ಬಾವುಟ ಜೋರು?

ಅಪ್ಪ ಅಮ್ಮ ಮಕ್ಕಳು ಕೂತು
ದೇಶ ಭಕ್ತಿ ಗೀತೆ ಒಂದತ್ತು
ಹಾಡ್ತಾರ ಕಿರುಚ್ತಾರ ಹಜಾರ
ಜನ ಸೇರೋದಂದ್ರೇನೆ ಬೇಜಾರ?

ಇಲ್ಯಾವ್ದೊ ವಿದೇಶದ ಮೂಲೆ
ದಿನದಂಗೆನೆ ಆಫೀಸು ಶಾಲೆ
ನೋಡ್ತಾರಾ ಕಂಪ್ಯುಟರ ಬಾವುಟ
ಜನಗಣಮನ ಮನಸಲ್ಲೆ ಹೇಳ್ತಾ?

  ಧನ್ಯವಾದಗಳೊಂದಿಗೆ 
  ನಾಗೇಶ ಮೈಸೂರು 

Comments

Submitted by makara Wed, 08/14/2013 - 20:35

ನಾಗೇಶರೆ, ಸಂಪದಿಗರೆಲ್ಲರ ಪರವಾಗಿ ನಿಮಗೂ ಸ್ವಾತಂತ್ರೋತ್ಸವದ ಶುಭಾಶಯಗಳು. ನಮ್ಮ ಜನ ಈ ಒಂದು ದಿವಸವಾದರೂ ಜನಗಣಮನ ಜ್ಞಾಪಿಸ್ಕೋತಾರಲ್ಲ ಅದೇ ಗ್ರೇಟು. ಇಲ್ಲದ್ದಿದ್ದರೆ ಇನ್ನು ಎಂಟ್ಹತ್ತು ವರ್ಷಗಳಾದ ಮೇಲೆ ಇದು ಯಾವುದೋ ಗೀತೆಯನ್ನು ಏ. ಆರ್. ರೆಹಮಾನ್ ಹೊಸದಾಗಿ ಕಂಪೋಸ್ ಮಾಡಿದಾನೆ ಅಂದ್ಕೋತಿದ್ರು :(( ದೇಶಕ್ಕೆ ಸ್ವಾತಂತ್ರ‍್ಯ ಬಂದರೂ ಸಹ ವಿದೇಶೀ ಮಾನಸಿಕತೆಯಿಂದ ನಾವು ಸ್ವಾತಂತ್ರ‍್ಯ ಪಡೆದಿಲ್ಲ ಎನ್ನುವುದೇ ಖೇದದ ಸಂಗತಿ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ದೇಶ ಪ್ರಗತಿ ಪಥದಲ್ಲಿದೆ ಎನ್ನುವುದೇ ಸಮಾಧಾನಕರ ಅಂಶ. ಜೈ ಭಾರತ್ ಮಾತಾ ಕೀ, ಜೈ!
Submitted by nageshamysore Thu, 08/15/2013 - 03:50

In reply to by makara

<<<<ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ದೇಶ ಪ್ರಗತಿ ಪಥದಲ್ಲಿದೆ ಎನ್ನುವುದೇ ಸಮಾಧಾನಕರ ಅಂಶ>>> - ಇಷ್ಟೆಲ್ಲಾದರ ನಡುವೆಯೂ 'ಹೇಗೋ' ಪ್ರಗತಿಯ ಪಥದಲ್ಲಿರುವ ರಥ - ಆ ತೊಡಕುಗಳಿರದಿದ್ದರೆ, ಇನ್ನೆಷ್ಟು ಮುಂದಕ್ಕೆ ವೇಗವಾಗಿ ಸಾಗಬಹುದಿತ್ತೊ ಏನೊ (ಎರಡೇ ಹೆಜ್ಜೆ ಪ್ರಗತಿಯ ಬದಲು ಇಪ್ಪತ್ತು ಹೆಜ್ಜೆ...!) ? ತೊಡಕು, ಕಗ್ಗಂಟುಗಳೆ ಅವಕಾಶಗಳೂ ಸಹ ಆಗಿರುವುದರಿಂದ, ಕನಿಷ್ಠ ಆ ಅವಕಾಶವನ್ನು ಬಳಸಿಕೊಂಡು ಮುನ್ನಡೆಯುವ ಸೈದ್ದಾಂತಿಕ, ರಾಜಕೀಯ ಮತ್ತು ಸಾಮಾಜಿಕ ಇಚ್ಚಾಶಕ್ತಿಗೆ ಈ ಸ್ವಾತಂತ್ರೋತ್ಸವ ನಾಂದಿ ಹಾಡಲೆಂದು ಹಾರೈಸೋಣ! ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Submitted by nageshamysore Thu, 08/15/2013 - 05:17

ಸಂಪದಿಗರೆ, ಸ್ವಾತಂತ್ರ ಎಂದಿರುವುದು ಸ್ವಾತಂತ್ರ್ಯ ಅಥವ ಸ್ವತಂತ್ರ ಎಂದಾಗಬೇಕು. ತುಸು ಆಡುಭಾಶ್ಹೆಯ ಲಹರಿಯಲ್ಲಿರುವುದರಿಂದ ಸ್ವಾತಂತ್ರ ಎಂದೆ ಉಳಿಸಿಕೊಂಡಿದ್ದೇನೆ ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು  
Submitted by kavinagaraj Thu, 08/15/2013 - 15:41

ನಾವೆಲ್ಲರೂ ಕೆಟ್ಟು ನಿಂತ ಬಸ್ಸನ್ನು ದೂಕುತ್ತಿದ್ದೇವೆ. ಆದರೆ ಒಟ್ಟಿಗೆ ದೂಕುತ್ತಿಲ್ಲ ಅಷ್ಟೆ! ಇವನು ನೂಕುವಾಗ ಅವನು ಸುಮ್ಮನಿರುತ್ತಾನೆ, ಅವನು ನೂಕುವಾಗ ಇವನು ಸುಮ್ಮನಿರುತ್ತಾನೆ. ಒಟ್ಟಿಗೆ ನೂಕುವುದು ಯಾವಾಗ? ಸ್ವಾತಂತ್ರ್ಯೋತ್ಸವದ ಶುಭಾಶಯಗಳು, ನಾಗೇಶರೇ.
Submitted by nageshamysore Thu, 08/15/2013 - 20:07

In reply to by kavinagaraj

ನಾಗರಾಜ್ ಸಾರ್, ನಿಮ್ಮ ಮಾತಿಗೆ ನಾನು ಹಿಂದೆ ಸಂಪದದಲ್ಲಿ ಬರೆದಿದ್ದ ಇರುವೆ ಮತ್ತು ರೊಟ್ಟಿ ತುಂಡಿನ ಕಥೆ ನೆನಪಾಯ್ತು. ಇರುವೆಗಳು ಬ್ರೆಡ್ ಎಳೆಯುವಾಗ ಗೊತ್ತು ಗುರಿಯಿಲ್ಲದೆ ಸಿಕ್ಕ ಕಡೆ ಎಳೆಯುತ್ತವಂತೆ. ನಿವ್ವಳ ಬಲ ಯಾವ ಕಡೆಗಿರುವುದೊ ಅತ್ತಕಡೆಗೆ ಬ್ರೆಡ್ ಚಲಿಸುವುದಂತೆ. ಅಲ್ಲಿ ಕನಿಷ್ಠ ಅವೆಲ್ಲ ಒಂದೆ ಸಾರಿಗೆ ಒಟ್ಟಾಗಿ ಎಳೆಯುತ್ತವೆ, ನಮ್ಮಲ್ಲಿ ಅದಕ್ಕೂ ಕೊರತೆ! - ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.    ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು