ಮತ್ತೊಂದು ಸ್ವಾತಂತ್ರದ ದಿನ....
ಪ್ರತಿ ಬಾರಿ ಸ್ವಾತಂತ್ರ ದಿನ ಹತ್ತಿರ ಬಂದಾಗ ನೆನಪಾಗುತ್ತದೆ - 'ಓಹ್ ನಾಳೆ ರಜೆ ಇಲ್ಲಾ..ಇದ್ದಿದ್ರೆ ಎಂಬೆಸ್ಸಿಗಾದ್ರೂ ಹೋಗಿ ಬರಬಹುದಿತ್ತು'....ಮೈಲ್, ಮೇಸೇಜ್ನಲ್ಲಿ ಗೊತ್ತಿರುವವರಿಗೆ 'ಹ್ಯಾಪಿ ಇಂಡಿಪೆಂಡೆಂಟ್ ಡೆ' ಕಳಿಸಿ, ಯಥಾ ಪ್ರಕಾರ ಮತ್ತೆ ಕೆಲಸದಲ್ಲಿ ಮುಳುಗೊ ಪ್ರವರ. ಹಾಗೆ ಒಂದಷ್ಟು ಜನ ಕಳಿಸಿರೊ ಮೇಲ್, ಚಿತ್ರ , ಶುಭಾಶಯಗಳ ಮಧ್ಯೆ ದಿನ ಕಳೆಯುತ್ತೆ. ಅದು ಬಿಟ್ಟರೆ 'ಸ್ವಾತಂತ್ರ ದಿನದ ವಾತಾವರಣ' ಅನ್ನೋದೇನು ಕಾಣದ ಜಾಗದಲ್ಲಿ ಆಗೀಗ ಹೀಗೊಂದು ಕವನ ಬರೆದರೆ ಅದೆ ಹೆಚ್ಚು. ಈ ಬಾರಿಯೂ ಆ ರೀತಿಯಲಿ ಹುಟ್ಟಿದ ಕವನ ಇದು - 'ಎಲ್ಲರಿಗೂ ನಾಳಿನ ಸ್ವಾತಂತ್ರ ದಿನದ ಶುಭಾಶಯಗಳೊಂದಿಗೆ' - ನಾಗೇಶ ಮೈಸೂರು
ಮತ್ತೊಂದು ಸ್ವಾತಂತ್ರದ ದಿನ....
_____________________
ಸ್ವಾತಂತ್ರ ಬಂದ ದಿನ
ಈ ಹೊತ್ತಿನಲೂ ಜನ
ನೆನಿತಾರ ಆ ಮಂದಿನ
ರಜೆ ಸಿಕ್ಕಿದ ಮಂದೇನ?
ಏಳುತ್ತಾರ ಜನ ಬೆಳಗು
ಜನಗಣಮನ ಒಳಗ್ಹೊರಗು
ಹಾಡ್ತಾರಾ ಒಂದೊಂದ್ಸಲಾ
ಅಡ್ಡಾಡುತ್ತಾರ ಹೋತಲಾ?
ಬೀದಿ ಮೂಲೆ ಕಂಬ ನೆಟ್ಟು
ಗಾಂಧಿದೊಂದು ಚಿತ್ರ ಇಟ್ಟು
ಸ್ವೀಟು ಚಾಕ್ಲೇಟು ಹಂಚ್ತಾರ
ಬೆಳಗಿನ ನಿದ್ದೆ ಹೊಂಚ್ತಾರ?
ಡಿಡಿನಲ್ಲೊ ಚಂದನದಲ್ಲೊ
ಬೋರಾದ್ರೂನು ದೇಶದ್ದಲ್ಲೊ
ಕೂತ್ಕೊಂಡು ಗಾಂಧಿ ನೋಡ್ತಾರ
ಮ್ಯಾಟಿನಿ ಶೋಗೆ ಓಡ್ತಾರಾ?
ರಜೆ ಗುರುವಾರ ಬರಿ ಶುಕ್ರವಾರ
ಲೀವ್ ಹಾಕಿ ಮಾಡಿದ್ರು ಟೂರ
ಕಾರು ಟೆಂಪೊ ಬಾನೆಟ್ಲಾದ್ರು
ಹಾರಾಡುತ್ತ ಬಾವುಟ ಜೋರು?
ಅಪ್ಪ ಅಮ್ಮ ಮಕ್ಕಳು ಕೂತು
ದೇಶ ಭಕ್ತಿ ಗೀತೆ ಒಂದತ್ತು
ಹಾಡ್ತಾರ ಕಿರುಚ್ತಾರ ಹಜಾರ
ಜನ ಸೇರೋದಂದ್ರೇನೆ ಬೇಜಾರ?
ಇಲ್ಯಾವ್ದೊ ವಿದೇಶದ ಮೂಲೆ
ದಿನದಂಗೆನೆ ಆಫೀಸು ಶಾಲೆ
ನೋಡ್ತಾರಾ ಕಂಪ್ಯುಟರ ಬಾವುಟ
ಜನಗಣಮನ ಮನಸಲ್ಲೆ ಹೇಳ್ತಾ?
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಮತ್ತೊಂದು ಸ್ವಾತಂತ್ರದ ದಿನ....
In reply to ಉ: ಮತ್ತೊಂದು ಸ್ವಾತಂತ್ರದ ದಿನ.... by makara
ಉ: ಮತ್ತೊಂದು ಸ್ವಾತಂತ್ರದ ದಿನ....
ಉ: ಮತ್ತೊಂದು ಸ್ವಾತಂತ್ರದ ದಿನ....
ಉ: ಮತ್ತೊಂದು ಸ್ವಾತಂತ್ರದ ದಿನ....
In reply to ಉ: ಮತ್ತೊಂದು ಸ್ವಾತಂತ್ರದ ದಿನ.... by kavinagaraj
ಉ: ಮತ್ತೊಂದು ಸ್ವಾತಂತ್ರದ ದಿನ....