ಮಲ್ಲಿಗೆ
ಕವನ
ಓ...ಮಲ್ಲಿಗೆ ಓಹೊ..ಮಲ್ಲಿಗೆ
ನಿನ್ನ ಚೆಲುವ ಕಂಡು ನನಗೆ
ಹೊಮ್ಮಿತು ಆನಂದ ಮನಸ್ಸಿಗೆ
ಹತ್ತಿರ ಬಂದೆ ಮೆಲ್ಲ ಮೆಲ್ಲಗೆ
ಕೊಟ್ಟೆ ಒಂದು ಮುತ್ತು ನಿನಗೆ
ಮುಟ್ಟಲು ಬಂದರೆ ಘಮ ಘಮಿಸುವೆ
ಮೆತ್ತಗೆ ನಿನ್ನನು ಮುದ್ದಾಡುವೆ
ದಿನವೂ ಸಿಗಲೆಂದು ಪ್ರಾರ್ಥಿಸುವೆ
ಸಿಗದಿರೆ ಕಾಯುತ್ತಲೇ ಇರುವೆ
ನನ್ನ ಪ್ರಾಣವು ನೀನಾಗಿರುವೆ
-ಸುಭಾಷಿಣಿ ಚಂದ್ರ, ಕಾಸರಗೋಡು
ಚಿತ್ರ್