ಮಹಾಭಾರತ- ಕಿರುತೆರೆ ಚರಿತ್ರೆಯಲ್ಲಿ ಅಮರವಾಗಿ ಉಳಿಯುವ ಮಹಾನ್ ಸೀರಿಯಲ್, ಬಿ. ಆರ್. ಛೋಪ್ರರವರ ಅನುಪಮ ಕೊಡುಗೆ!

ಮಹಾಭಾರತ- ಕಿರುತೆರೆ ಚರಿತ್ರೆಯಲ್ಲಿ ಅಮರವಾಗಿ ಉಳಿಯುವ ಮಹಾನ್ ಸೀರಿಯಲ್, ಬಿ. ಆರ್. ಛೋಪ್ರರವರ ಅನುಪಮ ಕೊಡುಗೆ!

ಬರಹ

ಅನೇಕ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಬಾಲಿವುಡ್ ನ ಹಿರಿಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಲದೇವ್ ರಾಜ್ ಛೋಪ್ರಾ (೫ನೆಯ ತಾರೀಖು), ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. 90 ದಶಕದಲ್ಲಿ ಮಹಾಭಾರತ ಕಥೆಯನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಅದರಿಂದ ಅವರ ಕೀರ್ತಿಯು ದೇಶವಿದೇಶಗಳಲ್ಲೂ ಹಬ್ಬಿ ಅವರು ಅಮರರಾದರು.

ಎಮ್. ಎ (ಇಂಗ್ಲೀಷ್) ನಲ್ಲಿ ಪದವಿ ಪಡೆದ ಬಿ. ಆರ್. ಛೋಪ್ರರವರು, ತಮ್ಮ ವೃತ್ತಿಜೀವನವನ್ನು ಪತ್ರಿಕೋದ್ಯಮದಲ್ಲಿ ಶುರುಮಾಡಿದ್ದರು. ದೆಹಲಿಯಿಂದ ಬೊಂಬಾಯಿಗೆ ಬಂದು, ಚಿತ್ರೋದ್ಯಮದ ಗಂಧವನ್ನೇ ಅರಿಯದ ಅವರು, ತಮ್ಮ ಮೊದಲಚಿತ್ರವನ್ನು ನಿರ್ದೇಶಿಸಲು ಹೊರಟ ಧೀಮಂತ ವ್ಯಕ್ತಿ- ಅದೂ ಅಶೋಕ್ ಕುಮಾರ್ ರವರನ್ನು ತಮ್ಮ ಚಿತ್ರದ ನಾಯಕನನ್ನಾಗಿ ಇರಿಸಿಕೊಂಡು ! ಅಶೋಕ್ ಅವರನ್ನು ಕೇಳೇ ಬಿಟ್ಟರು, " ನಿಮಗೆ ಚಿತ್ರ ನಿರ್ದೇಶನ ಅನುಭವವಿಲ್ಲದೆ, ನನ್ನಂತಹ, ಪ್ರಖ್ಯಾತನಟನನ್ನು ತೆಗೆದುಕೊಂಡು, ಮಹಾತಪ್ಪುಮಾಡುತ್ತಿದ್ದೀರಿ. ಇದರಿಂದ ನನ್ನ ಕೆರಿಯರ್ ಮೇಲೂ ದುಷ್ಪ್ರಭಾವವಾಗುವ ಸಾಧ್ಯತೆಗಳಿವೆ." ಆದರೆ ಆತ್ಮವಿಶ್ವಾಸದ ಖಣಿಯಾಗಿದ್ದ ಛೋಪ್ರರವರು ಅಂತಹ ತಪ್ಪುಮಾಡುವರೇ ? ಮುಂದೆ ಅಶೋಕ್ ಕುಮಾರ್ ಅವರ ಚಿತ್ರಗಳಲ್ಲಿ ಖಾಯಂಆಗಿ ನಟಿಸಲು ಆರಂಭಿಸಿದರು.

ಅವರಿಗೆ ಪ್ರಿಯರಾದ ಪಾರ್ಶ್ವಸಂಗೀತ ಗಾಯಕರು, ಶ್ರೀ ಮಹೇಂದ್ರಕಪೂರ್, ಮತ್ತು ಅವರ ಪ್ರಿಯರಾದ ನಟರು, ಅಶೊಕ್ ಕುಮಾರ್, ಸುನಿಲ್ ದತ್, ಮುಂತಾದವರು. ಅವರ ಹಲವಾರು ಚಿತ್ರಗಳು ದಾಖಲೆಯನ್ನೇ ನಿರ್ಮಿಸಿವೆ. ಅವರ ಚಿತ್ರಗಳ ಗೀತೆಗಳು ಇಂದಿನ ನವ-ಯುವಕರಿಗೂ ಮುದಕೊಡುವ ಗೀತೆಗಳು. ಧೂಲ್ ಕಾ ಫೂಲ್, ನಯಾ ದೂರ್, ವಕ್ತ್, ಹಮ್ ರಾಜ್, ಇನ್ಸಾಫ್ ಕಾ ತಾರಜು ಹಾಗೂ ನಿಖಾ ಚಿತ್ರಗಳು ಅವರ ನಿರ್ದೇಶನದ ಗರಡಿಯಿಂದ ಹೊರಬಂದಿದ್ದು, ಸಾಕಷ್ಟು ಜನಮೆಚ್ಚುಗೆಯನ್ನು ಪಡೆದಿದ್ದವು. ಖ್ಯಾತ ನಿರ್ದೇಶಕ ಯಶ್ ಛೋಪ್ರಾ, ಇವರ ಸಹೋದರರಾಗಿದ್ದಾರೆ. ಹೆಸರಾಂತ ನಿರ್ದೇಶಕ, ನಿರ್ಮಾಪಕ ಆದಿತ್ಯ ಛೋಪ್ರಾ ಇವರ ಅಳಿಯರಾಗಿದ್ದಾರೆ.

1960ರಲ್ಲಿ ಇವರ ನಿರ್ದೇಶನದ ಕನೂನ್ ಚಿತ್ರ ಶ್ರೇಷ್ಟ ಚಿತ್ರಕ್ಕೆಜೀವಮಾನ ಸಾಧನೆಗಾಗಿ ಫಿಲ್ಮಫೇರ್ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.
ಬಿ.ಆರ್.ಛೋಪ್ರಾ ಅವರು ಪುತ್ರ, ಹೆಸರಾಂತ ಚಿತ್ರ ನಿರ್ಮಾಪಕ ರವಿ ಛೋಪ್ರಾ ಹಾಗೂ ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ. ಛೋಪ್ರಾ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಬ್ಅರ್ಬನ್ ನ ಜುಹೋದಲ್ಲಿ ಅಂತ್ಯಸಂಸ್ಕಾರ, (೫ ನೆತಾರೀಖು) ಸಾಯಂಕಾಲ ನಡೆಯಿತು.

-ಚಿತ್ರ, ಐ. ಬಿ. ಎನ್