ಮಾಟ-ಮಂತ್ರದ ತಂತ್ರಕ್ಕೆ ಕತ್ತೆಯಂತಹ ಮತದಾರ ಪ್ರಾಣಿ ಬಲಿ!

ಮಾಟ-ಮಂತ್ರದ ತಂತ್ರಕ್ಕೆ ಕತ್ತೆಯಂತಹ ಮತದಾರ ಪ್ರಾಣಿ ಬಲಿ!

ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ’ ಎಂದೇ ತಳ್ಳಿಹಾಕಬೇಕೇನೊ! ಏಕೆಂದರೆ ವೈಚಾರಿಕತೆಗೂ, ರಾಜನೀತಿಗೂ ಇಂದು ಅಷ್ಟೇನೂ ತಾಳ-ಮೇಳ ಕಂಡುಬರುವುದಿಲ್ಲ. ಅಧಿಕಾರ ರಾಜಕೀಯದಲ್ಲಿ ಸೋಲು-ಗೆಲವುಗಳೇನಿದ್ದರೂ, Floor-test, ರಾಜಭವನದ Parade ಇತ್ಯಾದಿ Fashion showಗಳಿಗಷ್ಟೇ ಸಿಮಿತವಲ್ಲವೇ?


ಯಾವ ಪಕ್ಷದವರೇ ಆಗಲೀ, ರಾಜಕೀಯದವರೆಂದರೇ, ಶೋಷಕ, ಸೋಂಬೇರಿ ಜನ ಎನ್ನುವಂಥಾಗಿದೆ. ಇಂಥವರಿಂದ ಸಮಾಜಕ್ಕೆ ಆಗುತ್ತಿರುವ ಉಪಕಾರವದರೂ ಅಷ್ಟಕ್ಕಷ್ಟೆ! ಸ್ವಂತವಾಗಿ ದುಡಿದು ಏನೊಂದನ್ನಾದರೂ ಉತ್ಪಾದಿಸುವ ಯೋಗ್ಯತೆಯೇ ಈ ಜನರಲ್ಲಿ ಅನುಮಾನ. ಹೋಗಲಿ, ಸುಶಿಕ್ಷಿತರೂ, ಚಿಂತನಶೀಲರೂ, ದೂರಗಾಮೀ ಯೋಚನೆ-ಯೋಜನೆಗಳಿಂದ ಅಭಿವೃದ್ಧಿಗೆ ಸ್ಫೂರ್ತಿ ನೀಡಬಲ್ಲ ಮುತ್ಸದ್ದಿ ಮಹೋದಯರಾದರೂ (ಉದಾಹರಣೆಗೆ ಅಬ್ದುಲ್ ನಜೀರ್ ಸಾಹೇಬರಂಥವರು) ಇಂದು ರಾಜಕೀಯದಲ್ಲಿದ್ದಾರೆಯೇ? ತತ್ವ, ಸಿದ್ಧಾಂತ, ನೀತಿ, ನಿಯತ್ತುಗಳಿಗೆಲ್ಲಾ ಆತ್ಮಶ್ರಾದ್ಧ ಮಾಡಿಕೊಂಡವರಿಗಷ್ಟೇ ಈಗ  ರಾಜಕಿಯಕ್ಕೆ ಪ್ರವೇಶ! ಇಂಥವರಿಗೆ ಎಲ್ಲಿಯ ದೈವ? ಎಲ್ಲಿಯ ಧರ್ಮ? ಈ ಮನೋವಿಕಾರಿಗಳಿಗೆ ಕಾಣುವುದು ದೆವ್ವ-ಭೂತ, ಮಾಟ-ಮಂತ್ರಗಳೇ. ಈ ವಾಮಾಚಾರಕ್ಕೆ ಬಲಿಯಾಗುತ್ತಿರುವವರು, ನಾವು, ಕತ್ತೆಯಂತಹ ಮತದಾರ ಪ್ರಜಾಕೋಟಿ!