ಮಾಣ್(ಮಾಣು)

ಮಾಣ್(ಮಾಣು)

ಬರಹ

ಮಾಣ್/ಮಾಣು(ಕ್ರಿಯಾಪದ)= ಬಿಡು, ನಿವಾರಿಸು. ಸಾಮಾನ್ಯವಾಗಿ ಹೊಸಗನ್ನಡದಲ್ಲಿ ಬೞಸದೆ ನಡುಗನ್ನಡದವರೆಗೆ ಸಾಮಾನ್ಯವಾಗಿ ಬೞಕೆಯಾಗುತ್ತಿರುವ ಪದ. ಹೊಸಗನ್ನಡದಲ್ಲಿ ಇದರ ಬೞಕೆ ಜನಕ್ಕೆ ಅರ್ಥವಾಗುತ್ತದೆ. ಯಾಕೋ ಜನ ಬೞಸುತ್ತಿಲ್ಲ.

ಉದಾಹರಣೆಗೆ
ಹೞಗನ್ನಡದಲ್ಲಿ ಕವಿರಾಜಮಾರ್ಗದಲ್ಲಿ
ಜಾಣರ್ಕಳಲ್ಲದವರುಂ
ಪೂಣಿಗರಱಿಯದೆಯುಮಱಿವವೋಲವಗುಣದಾ
ತಾಣಮನಿನಿಸೆಡೆವೆತ್ತೊಡೆ
ಮಾಣದೆ ಪಿಡಿದದನೆ ಕೃತಿಗಳಂ ಕೆಡೆನುಡಿವರ್

ನಡುಗನ್ನಡದಲ್ಲಿ ಅಕ್ಕಮಹಾದೇವಿಯ ವಚನದಲ್ಲಿ
ಅಯ್ಯಾ, ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ಭರತೇಶವೈಭವದಲ್ಲಿ
ಭೂನಾಥನಂಗವೈದ್ಯರು ಬಂದು ನಿಂದರು
ಮೂನೂಱಱುವತ್ತು ಮಂದಿ
ಸೇನೆಯೊಳುಳ್ಳ ಸರ್ವರು ಬಂದು ನೆರೆದರು
ತಾನು ಮಾಣಿಪೆನೆಂದರವರು
ಇಲ್ಲಿ ಮಾಣಿಪೆನು=ಪ್ರೇರಣಾರ್ಥಕದಲ್ಲಿ ಮಾಣಿಪೆನು=ಮಾಣಿಸುವೆನು=ಬಿಡಿಸುವೆನು
ಬಿಡುವೆನು ಎಂಬರ್ಥದಲ್ಲಿ ಮಾಣ್ಬೆನು ಮಾಣ್ಬನು ಇತ್ಯಾದಿ
ಭೂತಕಾಲದಲ್ಲಿ ಮಾಣ್ದೆನು/ಮಾಂದೆನು ಮಾಣ್ದನು/ಮಾಂದನು ಇತ್ಯಾದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet