ಮಾಲು ಮುತ್ತುಗಳು...(ತಿದ್ದು ಮಾಡಿರುವ ಚುಟುಕಗಳು)

ಮಾಲು ಮುತ್ತುಗಳು...(ತಿದ್ದು ಮಾಡಿರುವ ಚುಟುಕಗಳು)

ಕವನ

 

ಪಿಸು ಮಾತಿದು ಗೆಳೆಯ!
ಧಗ ಧಗಿಸದೆ ಉರಿಯ
ತಿದಿ ಒತ್ತಿದ ಕುಲುಮೆ?
ನಮ್ಮಿಬ್ಬರ ಹೃದಯ
ತುಟಿಯೊತ್ತಲು ತುಟಿಗೆ
ಚಿಮ್ಮಿಸದೆ ಇರದೆ
ತುದಿ ಇಲ್ಲದ ಒಲುಮೆ?!
      *******
ಹತ್ತಿದ್ದೇನೆ ಈಗ
ಹರಯದ ಹಡಗ
ಹುಚ್ಚು ಹೊಳೆಯಲ್ಲಿ
ತೇಲಿಸದೆ 
ಮುಳುಗಿಸುವ 
ನಾವಿಕನಾಗಿ ನೀನು
ಬರುವೆಯ ಹುಡುಗಾ?!
-ಮಾಲು