ಮಿಡಿವ ಮನದ ಧ್ರುವ ನಕ್ಷತ್ರ

ಮಿಡಿವ ಮನದ ಧ್ರುವ ನಕ್ಷತ್ರ

ಕವನ

ಪಾರ್ವತಮ್ಮ ರಾಜಕುಮಾರ ದಂಪತಿಗಳ ಸುಕುಮಾರ

ಮುತ್ತುರಾಜ ಪುನೀತನೆನಿಸಿದ ಸೆಳೆವ ಮಾರ/

ಬಣ್ಣದ ಲೋಕದ ಆಡೊಂಬಲದ ಹಮ್ಮೀರ

ಮುಗುಳು ನಗೆ ಚೆಲ್ಲುವ ಕನ್ನಡದ ಕುವರ//

 

ಪುಟ್ಟ ಕಂದಮ್ಮನಾಗಿ ರಂಗದಲಿ ಮಿಂಚಿದೆ

ಬೆಟ್ಟದ ಹೂವಾಗಿ ಕಂಪನು ಬೀರಿದೆ/

ಸಂಪಿಗೆಯ ಘಮಲಾಗಿ ಮುತ್ತಿನ ಬಂಧುವಾದೆ

ಸೋತವರ ಧ್ವನಿಯಾಗಿ ಕೈ ಜೋಡಿಸಿದೆ//

 

ನಿನ್ನ ನಗುವಿನುತ್ಸಾಹದ  ಚಿಲುಮೆ

ನೀನಾದೆ ಕಣ್ಣೊರೆಸುವ ಒಲುಮೆ/

ಓ ಗುಣಸಿಂಧು ಹೇಗೆ ಮರೆಯಲಿ

ಕನ್ನಡ ಚಿತ್ರರಂಗ ಬಡವಾಯಿತಿಲ್ಲಿ//

 

ಅಕಾಲದಿ ನಮ್ಮನೆಲ್ಲ ಅಗಲಿದ ಧೀಮಂತ 

ಹೃದಯವು ತುಂಬಿದ ಸದ್ಗುಣಂಗಳ ಶ್ರೀಮಂತ/

ಕೊಡುಗೈ ದಾನಿಯಾದ ಪವಿತ್ರ ಧೀರೋದಾತ

ಬಡವರ ಬಂಧು ಸಹಕರಿಸಿದ ಮಿತ್ರ//

 

ಕಣ್ಣೆರಡ ನಾಲ್ವರಿಗೆ ಕಾಣಿಕೆಯಾಗಿಸಿ ಮೆರೆದೆ

ಈರ್ವರು ಹೆಣ್ಣುಮಕ್ಕಳ ಅಪ್ಪನಾಗಿ ದಾರಿ ತೋರಿದೆ/

ಮಡದಿಯ ಮುದ್ದಿನ ಗಂಡನಾಗಿ  ಸಂಸಾರಿಯಾದೆ

ಅಭಿಮಾನಿಗಳ ಮನಸ್ಸಿಗೆ ಲಗ್ಗೆಯಿರಿಸಿದೆ//

 

ಸರಕಾರದ ಯೋಜನೆಗಳ ರಾಯಭಾರಿಯಾದೆ

ಅನಾಥ ವೃದ್ಧ ಕಂದಮ್ಮಗಳಿಗೆ ಬದುಕು ನೀಡಿದೆ/

ಆಹಾ!ಸಿರಿಕಂಠದ ಸರದಾರ ಸನ್ಮಿತ್ರ

ಮಿಡಿವ ಮನದ ಧ್ರುವ ನಕ್ಷ್ಮತ್ರ//

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್