ಮುಂಬೈನ, ಘಾಟ್ಕೋಪರ್ ನ ಹಿಮಾಲಯಾ ಕೋ.ಸೊ.ಯಲ್ಲಿ ಅಧ್ಯಾತ್ಮಿಕ ಪ್ರವಚನ ಮತ್ತು ಭಜನೆ !

ಮುಂಬೈನ, ಘಾಟ್ಕೋಪರ್ ನ ಹಿಮಾಲಯಾ ಕೋ.ಸೊ.ಯಲ್ಲಿ ಅಧ್ಯಾತ್ಮಿಕ ಪ್ರವಚನ ಮತ್ತು ಭಜನೆ !

'ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ್' ಆಯೋಜಿಸಿದ ಅಧ್ಯಾತ್ಮಿಕ ಪ್ರವಚನ, ಭಜನೆ ಮತ್ತು ಸಂಕೀರ್ತನೆಗಳನ್ನು ಮುಂಬೈನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಕೋ.ಸೊಸೈಟಿಯಲ್ಲಿ ೨೦೧೨ ರ, ನವೆಂಬರ್,   ೫, ೬, ೭ ರಂದು ನೆರೆವೇರಿಸಲಾಗುತ್ತಿದೆ. ಇಂದು ಕೊನೆಯದಿನ. ಪ್ರವಚನದ ಪ್ರಮುಖ ವಿಷಯಗಳು :

೧. ಇಂದಿನ ಮನುಷ್ಯ ಏಕೆ ಅಶಾಂತನಾಗಿದ್ದಾನೆ. ಈ ಮಾನವ ಜನ್ಮದ ನಿಜವಾದ ಉದ್ದೇಶ್ಯವೇನು ?

೩. ಗುರುವಿನ ಆವಶ್ಯಕತೆ ಏನು  ?

೪.  ನಿಜವಾದ ಗುರುವಿನ ದರ್ಶನವೇನು ಧರ್ಮಗ್ರಂಥಗಳಲ್ಲಿ ಗುರುವಿನ ಭೂಮಿಕೆಯನ್ನು ಹೇಗೆ ಗುರುತಿಸಿದ್ದಾರೆ.

೫.  ಎಲ್ಲಾ ಧರ್ಮಗ್ರಂಥಗಳು ಹೇಳುವುದು ಇಷ್ಟೇ.  ಕಣ್ಣುಮುಚ್ಚಿಕೊಂಡು ಧರ್ಮವನ್ನೂ ಅನುಸರಿಸದಿರಿ. ಧರ್ಮದ ಪರಿಭಾಷೆಯನ್ನು ಒಬ್ಬ ಸದ್ಗುರುವಿನ ಸಹಾಯದಿಂದ ಅರಿಯಿರಿ.

ಈ ಪ್ರವಚನ ಹಿಂದಿ ಭಾಷೆಯಲ್ಲಿದ್ದು ಬಹಳ ಸುಂದರವಾಗಿ ಹೇಳಲ್ಪಡುತ್ತಿದೆ. ಶ್ರದ್ಧಾಳುಗಳು ಇದರ ಉತ್ತಮ ಲಾಭವನ್ನು ಪಡೆಯುವುದು ಒಳ್ಳೆಯದು.

 

-ಚಿತ್ರ ಹಾಗೂ ವಿವರಣೆ :

 

-ಹೊರಂಲವೆಂ 

Comments

Submitted by ಗಣೇಶ Fri, 11/09/2012 - 00:08

ವೆಂಕಟೇಶರೆ, ನಿಮ್ಮ ಕತೆನೇ ಗೊತ್ತಾಗುತ್ತಿಲ್ಲ.:) ಒಂದು ದಿನ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೇಲಿರುತ್ತೀರಿ, ಮಾರನೇ ದಿನ ಚೆನ್ನೈ ದೇವಸ್ಥಾನದಲ್ಲಿ, ಮತ್ತೆ ನೋಡಿದರೆ ಮುಂಬೈ ಸತ್ಸಂಗದಲ್ಲಿ! :) ಈ ಸ್ವಾಮೀಜಿಯನ್ನು ನೋಡಿದರೆ ಯಾಕೋ ಅನುಮಾನ. (ಈಗೀಗ ಸ್ವಾಮೀಜಿಗಳನ್ನು ಅನುಮಾನದಿಂದಲೇ ನೋಡುವುದು ಅಭ್ಯಾಸವಾಗಿದೆ:) ) ಅಂ.ಭಂ.ಸ್ವಾಮಿ.
Submitted by venkatesh Fri, 11/09/2012 - 08:34

In reply to by ಗಣೇಶ

ಗಣೇಶ್ ನಿಮ್ಮ ಮಾತು ಸತ್ಯ. ನನ್ನ ಮಕ್ಕಳು ಅದನ್ನೇ ಅನುಮೋದಿಸುತ್ತಾರೆ. ಉಉತಕ್ಕೆ ಕುಳಿತಾಗ ನಾನು ಏನೋ ಹೇಳುತ್ತಿರುತ್ತೇನೆ. ಅದು ಬಹುಶಃ ನನ್ನಂತಹ ವಯಸ್ಸಾದವನಿಗೆ ಸಹಜ ! ಇದನ್ನು ಸಧ್ಯ ಈಗಲಾದರೂ ನಾನು ಅರಿತಿದ್ದೇನೆ ! ಅದೇನೋ ಎಲ್ಲವನ್ನೂ ನಿಮ್ಮಂತಹ ಸಹೃದಯರ ಮುಂದೆ ಹೇಳಿಕೊಳ್ಳಬೇಕು ಎನ್ನುವ ಆತುರ. ಇನ್ನು ನನಗು ಮುಂಬೈನ ಸಾಧುಗಳನ್ನು ನೋಡಿದಾಗ ಮೇಲ್ನೋಟದಲ್ಲಿ ಹಾಗೆಯೇ ಅನಿಸಿತು. ಮುಖ್ಯವಾಗಿ ಅವರ ಚಿತ್ರ ತಮಗೆ ಕಂಡಿತು. ಇದಕ್ಕೆ ನಾನು ಧನ್ಯ. ಮತ್ತೆ, ಅವರು ಹಿಂದಿಯಲ್ಲಿ ಕೊಟ್ಟ ಸತ್ಸಂಗ್ ಪ್ರವಚನ ಚೆನ್ನಾಗಿಯೇ ತರ್ಕಬದ್ಧವಾಗಿತ್ತು. ಅವರ ವೈಯಕ್ತಿಕ ಬದುಕನ್ನು ಕಟ್ಟಿಕೊಂಡು ನಮಗೇನು ಅಲ್ಲವೇ ಸಾರ್ ? ಈ ಸನ್ಯಾಸಿಗಳ ಪ್ರವಚನಗಳು 'ಆಸ್ಥ ಚಾನೆಲ್' ನಲ್ಲಿ ಬರುತ್ತವಂತೆ. ಇಷ್ಟು ವಿಷಯ. ತಮಗೆ ಮತ್ತೊಮ್ಮೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ವಿಶ್ವಾಸ ಹೀಗೆಯೇ ಮುಂದುವರೆಯಲಿ....