ಮುದ್ದು ಕಂದ

ಮುದ್ದು ಕಂದ

ಕವನ

ಕಂದ  ನನ್ನ ಮುದ್ದು ಕಂದ 

ಕಿಲಕಿಲ ನಗುತ ಬರುವ 

ನನ್ನ ಮುದ್ದು ಮೊಗದ ಕಂದನೆ 

ನಿನ್ನ ಆ ತೊದಲು ನುಡಿಗಳು

ಕೇಳಲೆಷ್ಟು ಆನಂದ||

 

ನೀ ಅಮ್ಮಾ ಎಂದು ಕರೆವ 

ದನಿಯು ಕೇಳಲೆಷ್ಟು ಮಧುರ  

ಪುಟ್ಟ ಪುಟ್ಟ ಹೆಜ್ಜೆ ಇಡುತ ಬರುವ 

ನಿನ್ನ ಕಾಲ್ಗೆಜ್ಜೆ ಸ್ವರವು ಮನಕೆ

ಎಷ್ಟು ಇಂಪು ಕಂದನೆ 

 

ನಿನ್ನ ಎತ್ತಿ ಮುದ್ದಾಡಲು

ಎದ್ದು ಬಿದ್ದು ಓಡಿ ಬರುವ

ನಿನ್ನನು ನೋಡಲೆಷ್ಟು ಅಂದ

ದೇವರ ರೂಪ ನೀನಲ್ಲವೇ

ಬಾಳಿನ ದೀಪ ನೀನಲ್ಲವೇ ||

 

ನಿನ್ನ ಚಂದ ಅದೆಷ್ಟು ಖುಷಿಯು 

ಮುದ್ದು ಮುದ್ದು ಮಾತುಗಳೇ

ಸ್ನೇಹಕ್ಕೆ ಸ್ನೇಹ ಕೊಡುವ ಕಂದನೆ 

ನಿನ್ನನು ಪಡೆದ ಅಮ್ಮ ನಾನೆ ಧನ್ಯಳು

ಅಮ್ಮ ನಾನೆ ಧನ್ಯಳು 

-ಸುಭಾಷಿಣಿ ಚಂದ್ರ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್