ಮುಪ್ಪು..
ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ ಮುಕ್ತಿ ಅರಸಿ ಹೊಸ್ತಿಲ ದಿಂಬಾಗಿಸಿ ಕಾಲ ಸವೆಸೋ ಕ್ರಿಯೆಗೂ ಮುಪ್ಪಾಗಿದೆ .
ಈ ನಡುವೆ ನನ್ನಲ್ಲಿ ಒಂದು ಬಗೆಯ ಪಾಪ ಪ್ರಘ್ನೆ ಶಾಶ್ವವತವಾಗಿದೆ , ನಿನ್ನ ಪ್ರೀತಿ , ನಿನ್ನಲ್ಲಿ ನಾನಾಗುವ ಪ್ರೀತಿಯಾ ಬಗ್ಗೆ ,
ಅದು ಕೇವಲ , ಇಂದು ನನ್ನ ಆವರಿಸಿರುವ ಮುಪ್ಪ, ಚಿರಂತನವಾಗಿ ದೂರವಾಗಿಸುವ , ತೀಕ್ಷ್ಣವಾಗಿ ಸೀಳಿ ಕಣ್ಣ ಅಂಗಳ ಕೆಮ್ಪಾಗಿಸುವ ಸಾವ ಭಯವ ನಿರಂತರವಾಗಿ ಮಂಕಾಗಿಸಲು ನನ್ನ ಸ್ವಾರ್ಥ ಮನದ ಸಂಚ ? ಇರಲಿ .,.
ಈ ನಡುವೆ ಸಣ್ಣ ಸಲಿಗೆಯಲ್ಲಿ ಎನ್ನ ಮಾತಿಗೆಳುಯುವ ಹಲವು ಬೆಂಚುಗಳು ಪಾರ್ಕಿನ ಸುತ್ತ ಕಾಯುತ್ತವೆ , ಅನುದಿನ ಅವುಗಳೆಡೆಗೆ ಬೆನ್ನ ತಾಕಿಸಿ ನಿನ್ನ ಕಥೆ ಹೇಳುತ್ತೇನೆ .
ನಿನ್ನೆಯಲ್ಲೇ ಬದುಕುವ ನನ್ನ, ಅನಂತ ಭಾವಗಳ ಭಾರ ಹೊರುವ ಬೆಂಚುಗಳಿಗೆ ಏಕತಾನತೆ ಕಾಡದಿರಲೆಂದು ಅನುದಿನ ಬೆಂಚು ಬದಲಿಸುತ್ತೇನೆ , ಅನುದಿನ ನಾನು ಕತ್ತಲಿಗಂಜಿ ಮನೆಗೆ ಹೊರಡುವಾಗ ದಾರಿಯುದ್ದ ಒಂದು ನಿಯತಕಾಲಿಕ ಆಲೋಚನೆ, ಇಡಿ ರಾತ್ರಿ ಆ ಪಾರ್ಕಿನ ಬೆಂಚುಗಳು ಪರಸ್ಪರ ಮಾತಿಗಿಳಿದರೆ , ನನ್ನವಿಚಾರ ಸ್ವಾರಸ್ಯವಾಗಬಹುದು! ಏಕತಾನವಾದರೆ ?? ಜೀವ ಕಂಪಿಸುತ್ತದೆ , ಪಾರ್ಕು ಬದಲಿಸುವ ಯೋಚನೆ ಮೂಡುತ್ತದೆ .
ಮತ್ತಾರೋ ನನ್ನ ಅರಿತ ಬೆಂಚ ಆರಿಸಿ ಕೂತು, ನನ್ನ ನೋವ ಕಾವಿಗೆ ಮೈ ಬೆಚ್ಚಗಾಗಿಸಿಕೊಂಡರೆಮ್ಬ ಭಯವು ಕಾಡುತ್ತದೆ .
Comments
ಉ: ಮುಪ್ಪು..
ಕುತೂಹಲ ಮೂಡಿಸುವ ಬರಹ.