ಮುಮುಕ್ಷು

ಮುಮುಕ್ಷು

ಬರಹ

ಮೈ ಕಂಡಂತೆ
ಮನ ಮಿಂದಂತೆ
ಕಣ್ ತುಂಬಿದಂತೆ
ಕಂಡೆನು ಶ್ರೀ ಗುರುವನು
ಬಂದನೋ ತಂದನೋ
ಜ್ಞಾನವನ್ನು
ತಿಳಿದೆನೋ ಕಂಡೆನೋ
ಜಗದರಿವನು
ಸಾಧ್ಯವೋ ಅಸಾಧ್ಯವೋ
ಗೆಲುವೋ ಸೋಲೋ
ಬಂದನಿಂತು ತಂದನು
ಸಾವಿಗಂಜಿದವನಲ್ಲ
ಸೋಲಿಗಂಜಿದವನಲ್ಲ
ಗುರುವಿಗಂಜಿ
ಗುರುಯ ಕಂಡುಕೊಂಡೆ
ಜಗದಿ ಜೀವದಾತ್ಮನಾರು?
ಮನದಿ ಆತ್ಮ ಬ್ರಹ್ಮನಾರು
ಹುಡುಕಿ ಹುಡುಕಿ ಗುರುವಿನಲ್ಲಿ
ಬ್ರಹ್ಮಾತ್ಮನ ಕಂಡೆನು

ಕನ್ಯಾಕುಮಾರಿಯ ಶ್ರೀ ಸ್ವಾಮಿ ವಿವೇಕಾನಂದರ ಅದ್ಭುತ ,ಸಾಗರೋಪಮ ಮೂರ್ತಿಯನ್ನು ಕಂಡಾಗ ಹೊಳೆದ ಸಾಲುಗಳು