ಮೆರೆದ ಮಾನವೀಯತೆಯನ್ನು ಮೆರೆಸುವುದು ಕೂಡ ಮಾನವೀಯತೆಯೆ

ಮೆರೆದ ಮಾನವೀಯತೆಯನ್ನು ಮೆರೆಸುವುದು ಕೂಡ ಮಾನವೀಯತೆಯೆ

ಬರಹ

ನಮಸ್ಕಾರ,
ನನ್ನದೊಂದು ಮಾತು, ಮರ ಕಡಿಯದಿರಿ ಮರ ಕಡಿಯದಿರಿ ಎನ್ನುವುದಕ್ಕಿಂತ ಮರ(ಗಿಡ) ನೆಡುವುದರಲ್ಲಿ ನಾವು ಹೆಚ್ಚು ಆಸಕ್ತಿ ತೋರಿಸಬೇಕು,
ನೀವು ಅಭಿವೃದ್ದಿಯ ಹೆಸರಲ್ಲಿ ಒಂದು ಮರ ಕಡಿದರೆ ನಾವು ನೂರು ಮರಗಳನ್ನು ನೆಡುತ್ತೇವೆ ಎಂಬುವಂತಿದ್ದರೆ ನಮ್ಮದು ಸಾಮಾಜಿಕ ಪ್ರಜ್ಙೆಯೆನ್ನಿಸಿಕೊಳ್ಳುತ್ತದೆ.
ಅದನ್ನು ಬಿಟ್ಟು ಧಮ೯ಸ್ಥಳಕ್ಕೆ ಹೋಗಲೋ, ಮಂಗಳೂರಿಗೆ ಹೋಗಲೋ ಮರ ಕಡಿದು ರಸ್ತೆ ಮಾಡುವುದು ಬೇಡವೆಂದರೆ ಹೇಗೆ?
ಲಾಲ್ ಬಾಗ್ ನಲ್ಲಿ ಮರ ಕಡಿಯದಿರಿ ಎನ್ನುವವರು ಏನಕ್ಕಾಗಿ ಮರ ಕಡಿಯುತ್ತಿದ್ದೇವೆ ಎಂಬುದನ್ನು ಯೋಚಿಸಿದ್ದೀರಾ? ಮೆಟ್ರೋ ಎಂಬುದು ಕೆಲವರ ಐಶಾರಮಕ್ಕೆ ಅಥವಾ ಶ್ರೀಮಂತಿಗೆ ಅಲ್ಲ
ಅದು ನಮ್ಮ ನಿಮ್ಮಂತಹ ಸಾಮಾನ್ಯ ಜನರಿಗೆ, ಮಧ್ಯಮ ವಗ೯ದ ಜನತೆಗೆ. ನಮ್ಮ ಆರೋಗ್ಯ ಮತ್ತು ಪರಿಸರದ ಆರೋಗ್ಯದ ದೃಷ್ಠಿಯಿಂದ ಅದು ಕೂಡ ಬೇಕಾಗಿರುವುದೇ
ಒಂದು ಮರ ಕೊಡುವ ನೆರಳನ್ನು ಅನುಭವಿಸುವವರು ನೂರಾರು ಮಂದಿ ಆದರೆ ಮೆಟ್ರೋದ ನೆರ‍ಳು ಸಾವಿರಾರು ಮಂದಿಗೆ ಸಿಗಲಿದೆ.ಮೆಟ್ರೋದಲ್ಲಿ ನಿಮ್ಮ ಮರವನ್ನು ಕಂಡುಕೊಳ್ಳಿ ಎಂದು ಹೇಳುತ್ತಿಲ್ಲ
ಆದರೆ ನಮ್ಮ ಸ್ವಾತಂತ್ರ್ಯಕ್ಕೆ ನಮ್ಮ ಹಿರಿಯರು ಬಲಿದಾನ ಮಾಡಿದ್ದರೆ ಹಾಗೆಯೇ ಎಂದುಕೊಳ್ಳೋಣ, ಹೇಗೆ ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುತ್ತೇವೆಯೋ ಹಾಗೆಯೇ
ಮರಗಳನ್ನೂ ಕೂಡ "ಹಳೆಯ ಮರಗಳ ನೆನಪಿನಲ್ಲಿ ಹಾಕಿದ ಹೊಸ ಮರಗಳಲ್ಲಿ" ಕಂಡುಕೊಳ್ಳೋಣ.
ನೂರು ಮಂದಿ ತಮ್ಮ ತಮ್ಮ ಕಾರು ಬೈಕುಗಳನ್ನು ಮನೆಯಲಿಟ್ಟು ರೈಲು ಹತ್ತಿದರೆ ನಮ್ಮನ್ನಗಲಿದ ಮರದ ಆತ್ಮ ತಣ್ಣಗಾದೀತು.
ಅಣೆಕಟ್ಟು ಕಟ್ಟಲು ಕಾಡು ಮುಳುಗಿರುವುದು ಎಷ್ಟು ಸತ್ಯವೋ ಅದರಿಂದ ಸಾವಿರಾರು ಮಂದಿ ಇಂದು ಅನ್ನ ನೀರು ಕಾಣುತ್ತಿರುವುದು ಕೂಡ ಅಷ್ಟೇ ಸತ್ಯ ಅಲ್ಲವೇ?

ಮರಗಳಿಗೆ ಒಂದು ನಿಗದಿತ ಆಯಸ್ಸು ಇದೆ, ಮಳೆಗೆ,ಗಾಳಿಗೆ ಕೂಡ ಮರಗಳು ಬೀಳಬಹುದು ಅಥವಾ ಮತ್ತೇನೋ ಆಗಬಹುದು ಆಗ ಯಾರನ್ನು ದೂಷಿಸುವುದು?
ಮರ ನೆಡುವುದೇ ಸರಿಯಾದ ದಾರಿ. ಹಾಗೆಂದು ಇರುವ ಮರಗಳೆನ್ನೆಲ್ಲಾ ಕಡಿದು ಬಿಡೋಣ ಎಂದು ಹೇಳುತ್ತಿಲ್ಲ ಆದರೆ ಅವಷ್ಯಕತೆ ಇದ್ದಲ್ಲಿ ಕಡಿಯುವುದರಲ್ಲಿ ಮತ್ತೆ ಹೊಸ ಮರಗಳನ್ನು ಬೆಳೆಸುವುದರಲ್ಲಿ
ತಪ್ಪಿಲ್ಲ ಎಂದು ನನ್ನ ಭಾವನೆ ನಮ್ಮ ಮರಗಳ ಮೇಲಿನ ಪ್ರೀತಿ ಲಾಲ್ ಬಾಗ್ ನ ನಾಲ್ಕು ಮರಗಳಿಗಷ್ಟೇ ಸೀಮಿತವಾಗದಿರಲಿ
ಅದು ಎಲ್ಲೆಡೆಯ ಮರಗಳ ಬಗ್ಗೆ ಇರಲಿ ಮತ್ತು ಅಷ್ಟೇ ಆಸಕ್ತಿ ಗಿಡ ನೆಡುವುದರ ಬಗ್ಗೆ ಇರಲಿ.
ಮರಕಡಿಯ ಬೇಡಿ ಎಂದಾಗ ಮಾತ್ರ ಫೋಟೊ ಕ್ಲಿಕ್ಕಿಸಿ ದೊಡ್ಡ ವಿಷಯ ಮಾಡಿದಂತೆಯೇ ನಾಲ್ಕು ಜನ ಸೇರಿ ನಾಲ್ಕು ಮರ ನೆಡುವುದನ್ನೂ ಕೂಡ ಸುದ್ದಿ ಮಾಡಿ,
ಹುಡುಕಿದರೆ ನಮ್ಮಲ್ಲಿ ನೂರಾರು ಸಾಲು ಮರದ ತಿಮ್ಮಕ್ಕಗಳು ದೊರೆತಾರು ಹುಡುಕಲು ಆಸಕ್ತಿ ಇರಬೇಕಷ್ಟೆ.
ಪತ್ರಿಕೆಗಳ ವಿಷಯ ಬಂದರೆ ಎರಡು ಸಾಲುಗಳನ್ನು ಬರೆಯಲೇ ಬೇಕು ಇಂದಿನ ವಿಜಯ ಕನಾ೯ಟಕದ ಮುಖಪುಟದಲ್ಲಿ
ಸ್ಟ್ರಾಂಗ್ ರೂಂ ತೆರೆದು ೫ ಬೆಕ್ಕಿನ ಮರಿಗಳನ್ನು ಉಳಿಸಿರುವುದನ್ನು ಓದಿದೆ, ಅಲ್ಲಿ ಬೆಕ್ಕನ್ನು ಗಮನಿಸಿದ ಪೋಲೀಸ್ ಪೇದೆಯಿಂದ ಹಿಡಿದು ಸ್ಟ್ರಾಂಗ್ ರೂಂ ತೆರೆಯಲು ಅನುವು ಮಾಡಿಕೊಟ್ಟ
ಮುಖ್ಯ ಚುನಾವಣಾ ಅಧಿಕಾರಿಯವರೆಗೆ ಎಲ್ಲರೂ ಅಭಿನಂದನಾಹ೯ರು,ಹಾಗೆಯೇ ಅಂತಹ ಸುದ್ದಿಯೊಂದನ್ನು ಮುಖಪುಟದಲ್ಲಿ ಮುದ್ರಿಸಿದ ಪತ್ರಿಕೆ ಕೂಡಾ.
ಇಂದಿನ ದಿನಗಳಲ್ಲಿ ಮೆರೆದ ಮಾನವೀಯತೆಯನ್ನು ಮೆರೆಸುವುದು ಕೂಡ ಮಾನವೀಯತೆಯೆ.
--ನರೇಂದ್ರ