ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ - ಈ ಭಾನುವಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ

ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ - ಈ ಭಾನುವಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ

ಬರಹ
ಸೆಪ್ಟೆಂಬರ್ 21 2008, ಭಾನುವಾರ
ಸ್ಥಳ: ಭೌತಶಾಸ್ತ್ರ ವಿಭಾಗ,
ಮೈಸೂರು ವಿಶ್ವವಿದ್ಯಾಲಯ,
ಮಾನಸಗಂಗೋತ್ರಿ, ಮೈಸೂರು.


ಮುಂಚಿನಿಂದಲೂ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ತಂತ್ರಾಂಶದ ಕಡೆಗೆ ಹೆಚ್ಚು ಒಲವಿರುವ "ಗೀಕ್&"ಗಳಿಗೆ ಮಾತ್ರ ಸೀಮಿತವಾದದ್ದು ಎಂಬ ಅನಿಸಿಕೆಯಿದೆ.  ಗ್ನು/ಲಿನಕ್ಸ್ ನ ಬಹುತೇಕ ಅಂಶವಾದ ಸ್ವತಂತ್ರ ತಂತ್ರಾಂಶ(free software -- free as in freedom) ಹಾಗೂ ಅದರಲ್ಲಿರುವ ಸ್ವಾತಂತ್ರ್ಯದ ಆಸ್ಥೆ ಕೂಡ ಕಂಪ್ಯೂಟರ್ ಸಾಫ್ಟ್ವೇರ್ ತಿಳಿದವರಿಗೆ ಮಾತ್ರ ಎಂಬ ಪರಿಕಲ್ಪನೆಯಿದೆ.

ಆದರೆ ಈ ಭಾನುವಾರ ಸೆಪ್ಟೆಂಬರ್ ೨೧, ೨೦೦೮ರಂದು ಮೈಸೂರು ವಿಶ್ವವಿದ್ಯಾಲಯದ ಫಿಸಿಕ್ಸ್ ಡಿಪಾರ್ಟಮೆಂಟ್ ನಲ್ಲಿ "ಗೀಕ್"ಗಳು, ಗ್ನು/ಲಿನಕ್ಸ್ ಆಸಕ್ತರು, ಬಳಸುವವರು ಎಲ್ಲರೂ ಒಟ್ಟಾಗಿ ಸ್ವತಂತ್ರ ತಂತ್ರಾಂಶ ಹಾಗೂ ಗ್ನೂ/ಲಿನಕ್ಸ್ ಬಗ್ಗೆ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಿದ್ದಾರೆ. ಸ್ವತಂತ್ರ ತಂತ್ರಾಂಶದಲ್ಲಿರುವ ಸ್ವಾತಂತ್ರ್ಯದ ಕುರಿತು ತಿಳಿಸಲಿದ್ದಾರೆ, ಅಲ್ಲದೆ ಗ್ನು/ಲಿನಕ್ಸ್ ಕುರಿತು ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಮಾಹಿತಿ ಒದಗಿಸಲಿದ್ದಾರೆ ಅವರಲ್ಲಿರುವ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಮಾಡಲಿದ್ದಾರೆ, ಗ್ನು/ಲಿನಕ್ಸ್ ನಲ್ಲಿ ಕನ್ನಡ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಲಿದ್ದಾರೆ.

ಗ್ನು/ಲಿನಕ್ಸ್ ಹಬ್ಬದ ಮೊದಲ ಆವೃತ್ತಿ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನಡೆಯಿತು. ಸಂಪದ ಸಮುದಾಯದ ಗ್ನು/ಲಿನಕ್ಸ್ ಆಸಕ್ತರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಸುಮಾರು ೩೭೭ ಕ್ಕೂ ಹೆಚ್ಚಿನ ಜನ ನೋಂದಾಯಿಸಿಕೊಂಡಿದ್ದರು.  ಇವರಲ್ಲಿ ಎನ್.ಜಿ.ಒಗಳು, ಸರ್ಕಾರಿ  ಇಲಾಖೆಗಳಿಂದ ಹಲವರು, ವೃತ್ತಿಪರರು, ವಿಧ್ಯಾರ್ಥಿಗಳು, ಜನಸಾಮಾನ್ಯರು ಹೀಗೆ ಎಲ್ಲರೂ ಭಾಗವಹಿಸಿದ್ದರು.

ಕಂಪ್ಯೂಟರ್ ಬಳಸುವ ಎಲ್ಲರಿಗೂ ಈ ಹಬ್ಬಕ್ಕೆ ಮುಕ್ತ ಅಹ್ವಾನವಿದೆ. ಈ ಬಾರಿ ಹಬ್ಬದಲ್ಲಿ ಸ್ವತಂತ್ರ ತಂತ್ರಾಂಶದ ಕುರಿತು ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಹಾಗೂ ದಿನಬಳಕೆಯ ಹಲವಾರು ಮುಕ್ತ ತಂತ್ರಾಂಶದ  ಅಪ್ಲ್ಲಿಕೇಷನ್ನುಗಳನ್ನು ಪರಿಚಯಿಸಿ ಬಳಸುವ ವಿಧಾನವನ್ನು ತೋರಿಸಿಕೊಡುತ್ತೇವೆ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯ ಬಗ್ಗೆ ತಿಳಿಸಿಕೊಡುತ್ತೇವೆ.

ಪೈರೇಟೆಡ್/ ಪ್ರೊಪ್ರೈಟರಿ ತಂತ್ರಾಂಶಗಳ ಬಳಕೆಯಿಂದ ಸೊರಗಿ, ವೈರಸ್ಸುಗಳ ತೊಂದರೆಗಳು ಅನುಭವಿಸಿದ್ದವರಿಗೆ  ಆ  ತೊಂದರೆಗಳಿಂದ ಮುಕ್ತರಾಗಲು ಇದು ಸದವಕಾಶವಾಗಬಹುದು.
ಬೆಂಗಳೂರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಪ್ರತಿಕ್ರಿಯೆ ಮತ್ತಷ್ಟು ಜನರಿಗೆ ಮುಕ್ತ  ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ ತಿಳಿಸುಕೊಡುವ ಉತ್ಸಾಹವನ್ನು ಮೂಡಿಸಿದೆ. ಕರ್ನಾಟಕದ ಎಲ್ಲ ಊರುಗಳಲ್ಲೂ ಈ ಮಾಹಿತಿ ತಲುಪಿಸಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಬಾರಿ ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬವನ್ನಾಚರಿಸಲಿದ್ದೇವೆ.  ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಐನ್‍ಸ್ಟೈನ್ ಆಡಿಟೋರಿಯಂ ನಲ್ಲಿ ಈ ಬಾರಿಯ ಲಿನಕ್ಸ್ ಹಬ್ಬ ನಡೆಯಲಿದೆ. ಆಸಕ್ತರು http://habba.in ಸೈಟಿನಲ್ಲಿ ನೋಂದಾಯಿಸಿಕೊಳ್ಳಬಹುದು.

ಪ್ರಸ್ತುತಿ:

ಹಾಗು ಸಂಪದ ಸಮುದಾಯ.

ಮತ್ತಷ್ಟು ಮಾಹಿತಿ:
ಗ್ನೂ/ಲಿನಕ್ಸ್: http://en.wikipedia.org/wiki/GNU/Linux
ಫ್ರೀ ಸಾಫ್ಟ್ ವೇರ್ ( ಮುಕ್ತ ತಂತ್ರಾಂಶ ) : http://en.wikipedia.org/wiki/Free_software
ಗ್ನು/ಲಿನಕ್ಸ್ ಹಬ್ಬ – http://habba.in
ಸಂಪದ ಕನ್ನಡ ಸಮುದಾಯ – http://sampada.net

(ಈ ಬರಹಕ್ಕೆ ಮಾಹಿತಿ ಸೇರಿಸಿದವರು: ಪ್ರವೀಣ್ ಮಾಯ್ಕರ್, ಮಂಜುನಾಥ ವಿ (ಮೊದ್ದುಮಣಿ) ಹಾಗು ಹರಿ ಪ್ರಸಾದ್ ನಾಡಿಗ್.)

ಇ‌ಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಸ್ ನಲ್ಲಿ ನಡೆದ ಮೊದಲ ಗ್ನು/ಲಿನಕ್ಸ್ ಹಬ್ಬದ ಕೆಲವು ಫೋಟೋಗಳು ಕೆಳಗಿವೆ: 

ಮತ್ತಷ್ಟು ಚಿತ್ರಗಳು >>